ಮಡಿಕೇರಿ, ಮೇ 17: ಜಿಲ್ಲೆಯ ವಿವಿಧೆಡೆಗಳಲ್ಲಿ ತೋಟ ಕಾರ್ಮಿಕರಾಗಿದ್ದ 264 ಮಂದಿಗೆ ಇಂದು ಜಿಲ್ಲಾಡಳಿತದಿಂದ ತವರೂರಿಗೆ ಕಳುಹಿಸಿಕೊಡಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಆದೇಶದಂತೆ ಉಪವಿಭಾಗಾಧಿಕಾರಿ ಟಿ. ಜವರೇಗೌಡ ನೇತೃತ್ವದಲ್ಲಿ ಈ ಕಾರ್ಮಿಕರನ್ನು ಕಳುಹಿಸಿ ಕೊಡಲಾಯಿತು.

ಮಡಿಕೇರಿ ತಾಲೂಕಿನ 115 ಕಾರ್ಮಿಕರು, ವೀರಾಜಪೇಟೆ ತಾಲೂಕಿನಿಂದ 36 ಹಾಗೂ ಸೋಮವಾರಪೇಟೆ ತಾಲೂಕಿನಿಂದ 113 ಮಂದಿ ಸೇರಿದಂತೆ 264 ಮಂದಿಯನ್ನು ರಾಜ್ಯ ಸಾರಿಗೆ ಬಸ್‍ಗಳಲ್ಲಿ ಮೂಲಸೌಕರ್ಯ ದೊಂದಿಗೆ ಉತ್ತರಪ್ರದೇಶದತ್ತ ಇಲ್ಲಿಂದ ಬೀಳ್ಕೊಡಲಾಯಿತು. ಮೈಸೂರಿನಿಂದ ಈ ಕಾರ್ಮಿಕರು ರೈಲು ಪ್ರಯಾಣ ಮುಂದುವರೆಸಲಿದ್ದಾರೆ.