ಸೋಮವಾರಪೇಟೆ, ಮೇ 16: ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ನೆರೆಯ ಹಾಸನ ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಸಂಪರ್ಕ ಸಾಧಿಸುವ ಬಹುತೇಕ ಒಳರಸ್ತೆಗಳನ್ನು ಬಂದ್ ಮಾಡಲಾಗಿದೆ.ಕೊಡಗಿನ ಗಡಿ ಹಂಚಿಕೊಂಡಿರುವ ಹಾಸನ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆ ಮತ್ತು ಸ್ಥಳೀಯರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯನ್ನು ಸಂಪರ್ಕಿಸುವ ಒಳರಸ್ತೆಗಳನ್ನು ಬಂದ್ ಮಾಡಲಾಗಿದೆ.ತಾಲೂಕಿನ ಕುಂದಳ್ಳಿ ಗ್ರಾಮದಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿದ್ದು, ಕಳೆದ ನಾಲ್ಕು ದಿನಗಳಿಂದ ಕಠಿಣ ತಪಾಸಣೆ ಮಾಡಲಾಗುತ್ತಿದೆ. ಕೂತಿ ಗ್ರಾಮದಲ್ಲೂ ಚೆಕ್ಪೋಸ್ಟ್ ಸ್ಥಾಪಿಸಿ ಕಟ್ಟುನಿಟ್ಟಿನ ತಪಾಸಣೆಗೆ ಪೊಲೀಸರು ಮುಂದಾಗಿದ್ದಾರೆ. ಇನ್ನು ಕೊಣನೂರು ಭಾಗಕ್ಕೆ ಸಂಪರ್ಕ ಸಾಧಿಸುವ ಭುವಂಗಾಲ, ಆಲೂರುಸಿದ್ದಾಪುರ ಸಮೀಪದ ಆಲದಮರ ರಸ್ತೆಗಳನ್ನೂ ನಿನ್ನೆ ದಿನ ಬಂದ್ ಮಾಡಲಾಗಿದೆ. ಒಳಭಾಗದ ರಸ್ತೆಗಳ ಮೂಲಕ ದ್ವಿಚಕ್ರ ಸೇರಿದಂತೆ ನಾಲ್ಕು ಚಕ್ರದ ವಾಹನಗಳ ಓಡಾಟ ಅಬಾಧಿತವಾಗಿದ್ದನ್ನು ಗಮನಿಸಿದ ಪೊಲೀಸ್ ಇಲಾಖೆ ಇದೀಗ ರಸ್ತೆಗಳನ್ನು ಬಂದ್ ಮಾಡಿದೆ.ಕೊಣನೂರು ವ್ಯಾಪ್ತಿಯ ಮರಿಯಾನಗರ, ಬೆಟ್ಟಗಳಲೆ ಭಾಗದಿಂದ ಭುವಂಗಾಲ ಮಾರ್ಗವಾಗಿ ಬಾಣಾವರ-ಹೆಬ್ಬಾಲೆ ರಸ್ತೆ ಸಂಪರ್ಕಿಸುವ ಒಳರಸ್ತೆಗೆ ಮಣ್ಣು ಸುರಿದು ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಅಂತೆಯೇ ಅರಣ್ಯದೊಳಗೆ ಸಂಪರ್ಕ ಸಾಧಿಸುವ ಆಲದಮರ ರಸ್ತೆಯನ್ನೂ ಬಂದ್ ಮಾಡಲಾಗಿದೆ. ಇದರೊಂದಿಗೆ ಮರಿಯಾನಗರದಿಂದ ಸಿದ್ದಲಿಂಗಪುರಕ್ಕೆ ಸಂಪರ್ಕ ಕಲ್ಪಿಸುವ ಕಚ್ಚಾರಸ್ತೆಯನ್ನೂ ಬಂದ್ ಮಾಡಲು ಇಲಾಖೆ ಮುಂದಾಗಿದೆ.
ಈ ವ್ಯಾಪ್ತಿಯಲ್ಲಿ ಹೊರಭಾಗದಿಂದ ತಾಲೂಕಿಗೆ ಆಗಮಿಸುವ ವಾಹನಗಳು ಬಾಣಾವರ ಚೆಕ್ಪೋಸ್ಟ್ ಮೂಲಕವೇ ಆಗಮಿಸಬೇಕಿದೆ. ಚೆಕ್ಪೋಸ್ಟ್ನಲ್ಲಿ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸಿದ ನಂತರವಷ್ಟೇ ಒಳಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದಿಂದ ನೀಡುವ ಪಾಸ್ಗಳನ್ನು ಪರಿಶೀಲಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಚೆಕ್ಪೋಸ್ಟ್ನಲ್ಲಿರುವ ಸಿಬ್ಬಂದಿಗಳು ತಿಳಿಸಿದ್ದಾರೆ.
ಕೂಡಿಗೆ ವರದಿ
ಕೊಡಗಿನ ಗಡಿ ಭಾಗ ಶಿರಂಗಾಲದ ತಪಾಸಣಾ ಗೇಟ್ನಲ್ಲಿ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 46 ದಿನಗಳಿಂದ ಕಟ್ಟುನಿಟ್ಟಿನ ತಪಾಸಣೆ ಪೆÇಲೀಸ್ ಇಲಾಖೆ ವತಿಯಿಂದ ನಡೆಯುತ್ತಿದೆ.
ಹಾಸನದಲ್ಲಿ ಈಗಾಗಲೇ ಕೊರೊನಾ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರುವವರನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಿ ನಂತರ ಅನುಮತಿ ಪತ್ರ ಇದ್ದರೂ ಸಹ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಂತರರಾಜ್ಯ ಮತ್ತು ಅಂತರ್ ಜಿಲ್ಲೆಯವರನ್ನು ಕ್ವಾರಂಟೈನ್ಗೆ ಒಳಪಡಿಸಲು ಮೇಲಾಧಿಕಾರಿಗಳಿಗೆ ಸಮಗ್ರ ವರದಿ ನೀಡುತ್ತಿರುವುದು ಕಂಡುಬರುತ್ತಿದೆ.
ಹಾಸನ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗಿರುವುದರಿಂದ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯ ವತಿಯಿಂದ
(ಮೊದಲ ಪುಟದಿಂದ) ಹಾರಂಗಿ ನಾಲೆ ರಸ್ತೆಗೆ, ಶಿರಂಗಾಲದ ಉಪ ಗ್ರಾಮಗಳ ಮೂಲಕ ಇರುವ ಎಲ್ಲಾ ಕಾಲುದಾರಿಗಳಿಗೆ ಜೆಸಿಬಿ ಮೂಲಕ ಮಣ್ಣು ಸುರಿಸಿ ತಡೆಮಾಡಲಾಗಿದೆ.
ಕುಶಾಲನಗರ ವರದಿ
ಕೊಣನೂರು ಭಾಗದಿಂದ ಶಿರಂಗಾಲ ಮೂಲಕ ತೆರಳುವ ಮತ್ತು ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು, ನಾಗರಿಕರನ್ನು ಸ್ಕ್ರೀನಿಂಗ್ಗೆ ಒಳಪಡಿಸಲಾಗುತ್ತಿದ್ದು ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಎರಡೂ ಜಿಲ್ಲೆ ಕಡೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಓಡಾಡುತ್ತಿದ್ದು ಇದರಿಂದ ಸಮಸ್ಯೆ ಉಂಟಾಗಬಹುದು ಎಂಬ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆದಿದೆ. ಅಂತರ್ ಜಿಲ್ಲಾ ಪಾಸ್ಗಳನ್ನು ಮಾತ್ರ ಹಾಸನ-ಕೊಡಗು ಜಿಲ್ಲಾ ಗಡಿಭಾಗದಲ್ಲಿ ಪರಿಶೀಲಿಸಿ ಜಿಲ್ಲೆಗೆ ಬರಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿರುವ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಕುಮಾರ್, ಅಂತರ್ ರಾಜ್ಯದಿಂದ ಬರುವ ಪ್ರಯಾಣಿಕರು ಮಾತ್ರ ಕುಶಾಲನಗರ ಕೊಪ್ಪ ಗಡಿ ತಪಾಸಣಾ ಕೇಂದ್ರ ಮೂಲಕ ಜಿಲ್ಲೆ ಪ್ರವೇಶಿಸಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.