ನವದೆಹಲಿ,ಮೇ. 16: ದೇಶವನ್ನು ದುಸ್ಥಿತಿಗೆ ದೂಡಿರುವ ಕೊರೊನಾ ಮತ್ತು ಲಾಕ್‍ಡೌನ್ ಪರಿಸ್ಥಿತಿಗಳನ್ನು ನಿರ್ವಹಿಸಲೆಂದು ಘೋಷಿಸಲ್ಪಟ್ಟಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನ ಬಗ್ಗೆ ಕಳೆದ ಮೂರು ದಿನಗಳಿಂದ ಹಂತಹಂತ ವಾಗಿ ವಿವರಣೆ ನೀಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನಾಲ್ಕನೇ ಸುದ್ದಿಗೋಷ್ಠಿಯಲ್ಲಿ ಈ ಕೆಳಗಿನ ಮಾಹಿತಿ ನೀಡಿದರು.‘ಇವತ್ತು ರಚನಾತ್ಮಕ ಸುಧಾರಣೆ ಕ್ರಮಗಳನ್ನು ಘೋಷಿಸುತ್ತೇವೆ. ಈÀ ಸುಧಾರಣಾ ಕ್ರಮಗಳಿಂದ ಹೆಚ್ಚೆಚ್ಚು ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಹೆಚ್ಚು ಉತ್ಪನ್ನಗಳು ಹಾಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು.ಎಂಟು ವಲಯಗಳ ಮೇಲೆ ಈ ಹೊಸ ಪ್ಯಾಕೇಜ್‍ನಲ್ಲಿ ಗಮನ ಕೊಡಲಾಗಿದೆ. ಕಲ್ಲಿದ್ದಲು, ಖನಿಜ, ರಕ್ಷಣಾ ವಲಯದ ಉತ್ಪಾದನೆ, ಏರ್‍ಸ್ಪೇಸ್ ಮ್ಯಾನೇಜ್ಮೆಂಟ್, ಏರ್‍ಪೋರ್ಟ್, ಎಂಆರ್‍ಒ, ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿದ್ಯುತ್ ವಿತರಣೆ ಕಂಪೆÀನಿಗಳು, ಅಣು ವಿದ್ಯುತ್- ಈ 8 ವಲಯಗಳಲ್ಲಿ ಸುಧಾರಣಾ ಕ್ರಮಗಳಿಗೆ ಹೆಜ್ಜೆ ಹಾಕುತ್ತೇವೆ ಎಂದಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕನೇ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾದ ಘೋಷಣೆಗಳು ಹೀಗಿವೆ:ಕಲ್ಲಿದ್ದಲು: ಈ ಕ್ಷೇತ್ರದಲ್ಲಿ ಮಹತ್ವದ ಸುಧಾರಣಾ ಕ್ರಮ ಜರುಗಿಸಲಾಗಿದೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸರ್ಕಾರಿ ನಿಯಂತ್ರಣವನ್ನು ತೆಗೆದುಹಾಕಲಾಗಿದೆ. ವಾಣಿಜ್ಯೀಕರಣಕ್ಕೆ ಹೆಜ್ಜೆ ಹಾಕಲಾಗಿದೆ. ಖಾಸಗೀ ಕಂಪೆÀನಿಗಳಿಗೆ ರೆವೆನ್ಯೂ ಶೇರಿಂಗ್ ಆಧಾರದಲ್ಲಿ ಗಣಿಗಾರಿಕೆ ಕೊಡಲು ನಿರ್ಧರಿಸಲಾಗಿದೆ.ಭಾರತದಲ್ಲಿ ಸಾಕಷ್ಟು ಕಲ್ಲಿದ್ದಲು ಸಂಗ್ರಹ ಇದೆ. ಬಹುತೇಕ ಭಾಗ ಇನ್ನೂ ಬಳಕೆಯಾಗದೇ ಉಳಿದಿದೆ. ಖಾಸಗಿಯವರಿಗೆ ಗಣಿಗಾರಿಕೆಗೆ ಅವಕಾಶ ಸಿಕ್ಕರೆ ಹೆಚ್ಚೆಚ್ಚು ಕಲ್ಲಿದ್ದಲು ಸಂಗ್ರಹ ಮಾರುಕಟ್ಟೆಗೆ ಸಿಗುತ್ತದೆ ಎಂದು ಸಚಿವರು ಹೇಳಿದ್ದಾರೆ.500 ಮೈನಿಂಗ್ ಬ್ಲಾಕ್‍ಗಳನ್ನು ಹಂಚಲಾಗುವುದು. ಬಾಕ್ಸೈಟ್ ಮತ್ತು ಕೋಲ್ ಎರಡನ್ನೂ ಜಂಟಿಯಾಗಿ ಹರಾಜು ಹಾಕಲಾಗು ವುದು. ಕ್ಯಾಪ್ಟಿವ್ ಮತ್ತು ನಾನ್ ಕ್ಯಾಪ್ಟಿವ್ ವರ್ಗೀಕರಣ ಇರುವುದಿಲ್ಲ ಎನ್ನಲಾಗಿದೆ.

ರಕ್ಷಣಾ ವಲಯ: ಕೆಲ ಮಿಲಿಟರಿ ಉಪಕರಣಗಳ ಆಮದನ್ನು ನಿಷೇಧಿಸಲಾಗುವುದು. ಈ ಆಮದು ನಿಷೇಧಿತ ಯುದ್ಧೋಪಕರಣಗಳ ಪಟ್ಟಿಯನ್ನು ಆಗಾಗ್ಗೆ ಪರಿಷ್ಕರಿಸಲಾಗು ವುದು. ಇಂಥ ಉಪಕರಣಗಳನ್ನು ದೇಶೀಯವಾಗಿಯೇ ಉತ್ಪಾದನೆ ಮಾಡಲಾಗುವುದು. ಹೈಟೆಕ್ ಉಪಕರಣಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುವುದು. ಉತ್ಪಾದನಾ ಘಟಕಗಳಾದ ಆರ್ಡಿನೆನ್ಸ್ ಫ್ಯಾಕ್ಟರಿಗಳನ್ನ ನಿಗಮೀಕರಣ ಮಾಡಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.ರಕ್ಷಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಯನ್ನು ಶೇ. 49ರಿಂದ 74 ಕ್ಕೆ ಏರಿಸಲಾಗಿದೆ.

ವಿಮಾನಯಾನ: ಏರ್‍ಸ್ಪೇಸ್ ಮ್ಯಾನೇಜ್ಮೆಂಟ್ – ದೇಶದಲ್ಲಿ ಈಗ ಶೇ. 60 ರಷ್ಟು ವಾಯುಸ್ಥಳ ಮಾತ್ರ ಮುಕ್ತವಾಗಿ ಲಭ್ಯವಿದೆ. ಏರ್‍ಪೋರ್ಟ್ ಬಳಕೆಯಲ್ಲಿದ್ದ ನಿರ್ಬಂಧಗಳನ್ನು ಸಡಿಲಿಸಲಾಗುವುದು. 12 ಏರ್ ಪೋರ್ಟ್‍ಗಳನ್ನು ಪಿಪಿಪಿ ಆಧಾರದ ಮೇಲೆ ಹರಾಜು ಹಾಕಲಾಗುವುದು. ಇದರಿಂದ ಏರ್‍ಪೋರ್ಟ್‍ಗಳ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ. ಇದರ ಲಾಭವು ಪ್ರಯಾಣಿಕರಿಗೆ ಸಿಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.(ಮೊದಲ ಪುಟದಿಂದ)

ವಿದ್ಯುತ್ ವಿತರಣೆ ಕಂಪನಿ: ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿದ್ಯುತ್ ವಿತರಣಾ ಕಂಪೆನಿಗಳನ್ನು ಖಾಸಗೀಕರಣಗೊಳಿಸಲಾಗುವುದು. ಇದರಿಂದ ಉತ್ತಮ ನಿರ್ವಹಣೆ ಸಾಧ್ಯವಾಗುತ್ತದೆ. ವೆಚ್ಚವೂ ಕಡಿಮೆಯಾಗುತ್ತದೆ. ಒಂದು ವೇಳೆ ಲೋಡ್ ಶೆಡ್ಡಿಂಗ್ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸೇವೆಯೂ ಉತ್ತಮಗೊಳ್ಳುತ್ತದೆ.

ಸಾಮಾಜಿಕ ಮೂಲಸೌಕರ್ಯ: ಸಾಮಾಜಿಕ ಮೂಲಸೌಕರ್ಯ ಯೋಜನೆಗಳಲ್ಲಿ ಕೊರತೆ ಬಿದ್ದಿರುವು ದನ್ನು ನೀಗಿಸಲು 8,100 ಕೋಟಿ ರೂ ಅನುದಾನ ನೀಡಲಾಗುತ್ತದೆ.

ಅಂತರಿಕ್ಷ ಕ್ಷೇತ್ರ: ಭಾರತದಲ್ಲಿ ಕೆಲ ಖಾಸಗಿ ಸಂಸ್ಥೆಗಳು ಅಂತರಿಕ್ಷ ಯೋಜನೆಗಳಲ್ಲಿ ಆಸಕ್ತವಾಗಿವೆ. ಆದರೆ, ಇವರಿಗೆ ಇಸ್ರೋದಲ್ಲಿರುವಂಥ ಸೌಲಭ್ಯಗಳು ಇಲ್ಲದೆ ಹಿನ್ನಡೆ ಆಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿಯವರನ್ನೂ ಅಂತರಿಕ್ಷ ಕ್ಷೇತ್ರದಲ್ಲಿ ಉತ್ತೇಜಿಸಲಾಗುವುದು. ಇಸ್ರೋದ ಸೌಲಭ್ಯಗಳನ್ನು ಮತ್ತು ತಂತ್ರಜ್ಞಾನವನ್ನು ಇವರು ಬಳಕೆ ಮಾಡಲು ಅವಕಾಶ ಕೊಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಒಗ್ಗೂಡಿ ಸ್ವಾವಲಂಬಿ ಭಾರತದ ನಿರ್ಮಾಣ ಮಾಡಬಹುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

ಅಣುಶಕ್ತಿ: ಪಿಪಿ ಮಾದರಿಯಲ್ಲಿ ಮೆಡಿಕಲ್ ಐಸೊಟೋಪ್‍ಗಳ ಉತ್ಪಾದನೆ ಹಾಗೂ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ರಿಸರ್ಚ್ ರಿಯಾಕ್ಟರ್‍ಗಳ ಉತ್ಪಾದನೆಯಲ್ಲಿಯೂ ಖಾಸಗಿ ಪಾಲುದಾರಿಕೆ ಹೆಚ್ಚಮಾಡಲು ತೀರ್ಮಾನಿಸಲಾಗಿದೆ.