ಸುಂಟಿಕೊಪ್ಪ, ಮೇ 16: ತೋಟವೊಂದರಲ್ಲಿ ಕಂಡುಬಂದ ನಾಗರಹಾವನ್ನು ಸೆರೆಹಿಡಿಯುವ ಸಂದರ್ಭ ಸಿಕ್ಕ ಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ, ಆರೈಕೆ ಮಾಡಿದ ಪರಿಣಾಮ ಇದೀಗ ನಾಗರ ಮರಿಗಳು ಹೊರಬಂದಿವೆ. ಉರಗ ಪ್ರೇಮಿ ಸ್ನೇಕ್ ಶಾಜಿ ಅವರ ಕಾಳಜಿಯಿಂದಾಗಿ 16 ನಾಗರ ಹಾವಿನ ಮರಿಗಳು ಜನ್ಮ ತಳೆದಿವೆ.
ಸಮೀಪದ ಡಿ.ಆನಂದ ಬಸಪ್ಪ ಅವರ ಪಣ್ಯ ತೋಟ ಸ್ವಿಮ್ಮಿಂಗ್ ಪೂಲ್ ಸಮೀಪದಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಬೃಹದಾಕಾರದ ನಾಗರ ಹಾವೊಂದು ಕಂಡು ಬಂದಿದೆ. ಕೂಡಲೇ ತೋಟದ ವ್ಯವಸ್ಥಾಪಕÀರು 7ನೇ ಹೊಸಕೋಟೆಯ ಉರಗ ಪ್ರೇಮಿ ಸ್ನೇಕ್ ಶಾಜಿ ಅವರಿಗೆ ಕರೆ ಮಾಡಿ ತಿಳಿಸಿದ್ದು ಸ್ನೇಕ್ ಶಾಜಿ ಸ್ಥಳಕ್ಕಾಗಮಿಸಿ ಹಾವನ್ನು ಹಿಡಿದಾಗ 16 ಮೊಟ್ಟೆಗಳು ಸಿಕ್ಕಿವೆ.
ಅದನ್ನು ತಮ್ಮ ಜೊತೆಯಲ್ಲಿಟ್ಟು ಹಾವನ್ನು ಅನೆಕಾಡು ಅರಣ್ಯಕ್ಕೆ ಬಿಟ್ಟಿದ್ದರು. ನಂತರ ಮೊಟ್ಟೆಗಳನ್ನು ಅರಣ್ಯ ಇಲಾಖೆಯ ಆರ್ಎಫ್ಓ ಅನನ್ಯ ಕುಮಾರ್, ಫಾರೆಸ್ಟರ್ ಅನಿಲ್ ಡಿಸೋಜ, ಡಿಆರ್ಎಫ್ಓ ಮಾದೇವ್ ನಾಯಕ್ ಅವರ ಸಹಕಾರ ಮತ್ತು ಪ್ರೋತ್ಸಾಹದಿಂದ ಕುಶಾಲನಗರ ಸಮೀಪದ ಗಂಧದ ಕೋಟೆÉಯ ಅರಣ್ಯ ತರಬೇತಿ ಕೇಂದ್ರದಲ್ಲಿ 16ರಿಂದ 20 ಡಿಗ್ರಿ ತಾಪಮಾನದಲ್ಲಿ ಸಂರಕ್ಷಿಸಿದ್ದರು. ಇದೀಗ 16 ಹಾವಿನ ಮರಿಗಳು ಮೊಟ್ಟೆಯಿಂದ ಹೊರಬಂದಿವೆ. ಎಲ್ಲ ಮರಿಗಳನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಆನೆಕಾಡು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಉರಗ ಪ್ರೇಮಿ ಸ್ನೇಕ್ ಶಾಜಿ ಅವರು ಸುಮಾರು 3500ಕ್ಕೂ ಹೆಚ್ಚನ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ. ಯಾವುದೇ ತರಹದ ಹಾವುಗಳು ಕಂಡು ಬಂದಲ್ಲಿ ಅವುಗಳನ್ನು ಕೊಲ್ಲದೆ ಸಾರ್ವಜನಿಕರು ಅವರ ಮೊಬೈಲ್ ಸಂಖ್ಯೆ 9448792261 ಕರೆ ಮಾಡುವಂತೆ ಕೋರಿದ್ದಾರೆ.