ನಾಪೆÇೀಕ್ಲು, ಮೇ 16: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕಳೆದ 2 ದಿನಗಳ ಹಿಂದೆ ಸುರಿದ ಭಾರೀ ಮಳೆ ಹಾಗೂ ಗಾಳಿಯ ಪರಿಣಾಮ ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಹಲವು ಕಟ್ಟಡಗಳಿಗೆ ಹಾನಿ ಸಂಭವಿಸಿದೆ.

ಪ್ಲೇ ಹೋಂ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ನೂತನ ಆಟದ ಕೋಣೆಯ ಮೇಲೆ ಮರ ಬಿದ್ದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮರ ಬಿದ್ದ ಕಾರಣದಿಂದ ಕೋಣೆಯ ಬಾಗಿಲು ತೆರೆಯಲೂ ಕೂಡ ಸಾಧ್ಯವಾಗಿಲ್ಲ. ಹಾಗೆಯೇ ಪ್ರೌಢಶಾಲಾ ವಿಭಾಗದ ಶೌಚಾಲಯದ ಛಾವಣಿ ಶೀಟುಗಳು, ಹೊರಗಿನ ಸಭಾಂಗಣದ ಶೀಟುಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ.

ಶಾಲೆಗೆ ರಜಾ ದಿನವಾಗಿರುವ ದರಿಂದ ಯಾವದೇ ಅನಾಹುತ ಸಂಭವಿಸಿಲ್ಲ. ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಜೋತಾಡುತ್ತಿದ್ದು, ಅಪಾಯದ ಭೀತಿ ಉಂಟಾಗಿದೆ ಎಂದು ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ಬೊಜ್ಜಂಗಡ ಅವನಿಜಾ ಸೋಮಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.