ಮಡಿಕೇರಿ, ಮೇ 17: ಕೊಡಗು ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಎಂ.ಎಸ್. ಪವನ್‍ಕುಮಾರ್ ಅವರು ತಾ. 19 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆ ತನಕ ಸೋಮವಾರಪೇಟೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕ ದೂರುಗಳನ್ನು ಆಲಿಸಲಿದ್ದಾರೆ. ತಾ. 20 ರಂದು ಇದೇ ಸಮಯ ವೀರಾಜಪೇಟೆ ತಾಲೂಕು ಕಚೇರಿ ಹಾಗೂ 21 ರಂದು ಮಡಿಕೇರಿ ತಾಲೂಕು ಕಚೇರಿಯಲ್ಲಿ ದೂರು ಪಡೆಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.