ವೀರಾಜಪೇಟೆ, ಮೇ. 16: ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧ ಪ್ರಯುಕ್ತ 42 ದಿನಗಳ ಹಿಂದೆ ಮಾಕುಟ್ಟ ಚೆಕ್‍ಪೋಸ್ಟ್‍ನ ಮೂಲಕ ಕೇರಳದಿಂದ ಯಾರೂ ಕೊಡಗಿನ ಗಡಿಯೊಳಗೆ ನುಸುಳದಂತೆ ರಸ್ತೆಯ ಅಡ್ಡಲಾಗಿ ಹಾಕಿದ್ದ ಮಣ್ಣನ್ನು ತೆಗೆದು ಬಂದೋಬಸ್ತ್ ತೆರವು ಮಾಡಿದ ಜಾಗವನ್ನು ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕೇರಳದ ಅಕ್ರಮ ವಲಸಿಗರು ಬಿಗಿ ಬಂದೋಬಸ್ತ್‍ಗಾಗಿ ಹಾಕಿದ್ದ ಮಣ್ಣಿನ ಗುಡ್ಡೆಯನ್ನು ತೆರವು ಮಾಡಿ ವಾಹನ ಓಡಿಸಿರುವುದು ಪತ್ತೆಯಾದ ನಂತರ ತಾಲೂಕು ಆಡಳಿತದ ವತಿಯಿಂದ ಪುನಃ ಜೆ.ಸಿ.ಬಿ.ಯಿಂದ ಮಣ್ಣು ಹಾಕಿ ಬಂದ್ ಮಾಡಲಾಗಿದೆ. ಬಿಗಿ ಬಂದೋಬಸ್ತ್ ಮುಂದುವರೆಸು ವಂತೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಶಾಸಕರ ಜೊತೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ರಘುನಾಣಯ್ಯ, ವೃತ್ತ ನಿರೀಕ್ಷಕ ಕ್ಯಾತೆಗೌಡ, ಇತರ ಅಧಿಕಾರಿಗಳು ಹಾಜರಿದ್ದರು.