ಕುಶಾಲನಗರ, ಮೇ 17: ಮನೆ ಕಂದಾಯ ಹಾಗೂ ವಾಣಿಜ್ಯ ತೆರಿಗೆ ಏರಿಕೆ ಮಾಡಿರುವ ಬಗ್ಗೆ ಸ್ಥಳೀಯ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ಸಾಲಿನ ಏಪ್ರಿಲ್ ತಿಂಗಳಿಂದ ಪಟ್ಟಣದ ಮನೆ ಕಟ್ಟಡಗಳಿಗೆ ಶೇ.18 ಹಾಗೂ ವ್ಯಾಪಾರ ತೆರಿಗೆ ಶೇ. 19 ಹೆಚ್ಚಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ನಡುವೆ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದು ತೆರಿಗೆ ಏರಿಕೆ ಜನರಿಗೆ ಭಾರಿ ಹೊರೆಯಾಗಲಿದೆ ಎಂದು ವರ್ತಕರು ತಿಳಿಸಿದ್ದಾರೆ

ತಕ್ಷಣ ಸರ್ಕಾರ ಈ ಬಗ್ಗೆ ಗಮನ ಹರಿಸಿ ತೆರಿಗೆಯನ್ನು ಇಳಿಸಬೇಕು. ಈ ಹಿಂದಿನಂತೆಯೇ ಮುಂದುವರಿಸಬೇಕು ಎಂದು ಸ್ಥಳೀಯ ಉದ್ಯಮಿ ಕೊಡಗನ ಹರ್ಷ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಸರ್ಕಾರದ ಆದೇಶದಂತೆ ಮೂರು ವರ್ಷಗಳ ಅವಧಿಯ ನಂತರ ನೂತನ ದರದಲ್ಲಿ ತೆರಿಗೆ ಪಾವತಿಸಲು ಸೂಚನೆ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.