ಸುಂಟಿಕೊಪ್ಪ,ಮೇ 16: ಇಲ್ಲಿನ ಕಂಬಿಬಾಣೆ ಪಂಚಾಯಿತಿಯ ಚಿಕ್ಲಿಹೊಳೆ ಗ್ರಾಮದ ಜೀವನ್ ಎಂಬವರ ಗದ್ದೆಗೆ ಕಾಡಾನೆ ದಾಳಿ ನಡೆಸಿ 1 ಎಕರೆಯಷ್ಟು ಬೆಳೆದು ನಿಂತ ಪೈರುಗಳನ್ನು ತಿಂದು ತುಳಿದು ನಾಶ ಪಡಿಸಿ ಎಂದು ಅರಣ್ಯ ಇಲಾಖೆ ದೂರು ನೀಡಿದ್ದಾರೆ. ರಾತ್ರಿ ವೇಳೆ 2 ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಿದ್ದು ಸುತ್ತಮುತ್ತಲಿನ ತೋಟ ಗದ್ದೆಗಳಿಗೆ ನಿರಂತರ ದಾಳಿ ಮಾಡುತ್ತಿವೆ. ಗ್ರಾಮಸ್ಥರು, ಕೂಲಿ ಕಾರ್ಮಿಕರು ಜೀವ ಭಯದಿಂದ ಜೀವನ ಮಾಡುವಂತ್ತಾಗಿದೆ. ಸಂಬಂಧಿಸಿದ ಇಲಾಖೆ ಆನೆಯನ್ನು ನಾಡಿನಿಂದ ಕಾಡಿಗೆÉ ಅಟ್ಟುವಂತೆ ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.