ಮಡಿಕೇರಿ, ಮೇ 16: ವಿವಾಹಿತ ಮಹಿಳೆಯೋರ್ವರ ಮೇಲೆ ಅತ್ಯಾಚಾರವೆಸಗಿ ಅದನ್ನು ಮೊಬೈಲ್‍ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ತಾವೂರು ಗ್ರಾಮದಲ್ಲಿ ಸೌದೆ ಕೆಲಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ಅದೇ ಗ್ರಾಮದ ಚಿದಾನಂದ ಹಾಗೂ ಚೇತನ್ ಎಂಬವರುಗಳು ಆಕೆಯನ್ನು ಬೆದರಿಸಿದ್ದಾರೆ. ನಂತರ ಚಿದಾನಂದ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ದನ್ನು ಚೇತನ್ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾನೆ. ಬಳಿಕ ಅದನ್ನು ಆಕೆಗೆ ತೋರಿಸಿ ಅತ್ಯಾಚಾರ ನಡೆದ ಬಗ್ಗೆ ಎಲ್ಲಾದರೂ ಬಾಯಿಬಿಟ್ಟರೆ ವೀಡಿಯೋವನ್ನು ಎಲ್ಲೆಡೆ ತೋರಿಸುವದಾಗಿ ಬೆದರಿಸಿದ್ದಾರೆ.ಇದರಿಂದ ಹೆದರಿದ ಆ ಮಹಿಳೆ ಸುಮ್ಮನಾಗಿದ್ದರಾದರೂ ಕೆಲದಿನಗಳ ಬಳಿಕ ಆರೋಪಿಗಳೇ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಚಾರ ಮಹಿಳೆಗೆ ಆಕೆಯ ಸಂಬಂಧಿಕರ ಮೂಲಕ ಗಮನಕ್ಕೆ ಬಂದಿದ್ದು, ನಂತರ ಆಕೆ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಎಸ್‍ಪಿ ಡಾ. ಸುಮನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ದಿನೇಶ್‍ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಸಿಐ ದಿವಾಕರ್, ಮಡಿಕೇರಿ ಮಹಿಳಾ ಠಾಣಾ ಸಿಐ ಸೋಮೆಗೌಡ, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.