ನಾಪೆÇೀಕ್ಲು: ಪುನಶ್ಚೇತನ ಸಂಸ್ಥೆಯ ವತಿಯಿಂದ ಸಂಸ್ಥೆಯ ವಿದ್ಯಾರ್ಥಿಗಳ ಪೆÇೀಷಕರಿಗೆ ಹಾಗೂ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಆಹಾರ ಕಿಟ್ ಮತ್ತು ಮಾಸ್ಕ್ ವಿತರಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಮುಖ್ಯಸ್ಥೆ ಬಾಳೆಯಡ ದಿವ್ಯಾ ಮಂದಪ್ಪ, ಮ್ಯಾನೇಜಿಂಗ್ ಟ್ರಸ್ಟಿ ಸೂರಜ್ ಗಣಪತಿ ಇದ್ದರು.ಸೋಮವಾರಪೇಟೆ: ಪಟ್ಟಣದ ಬಸವೇಶ್ವರ ರಸ್ತೆಯ ನಿವಾಸಿಗಳು ಹಾಗೂ ಸ್ನೇಹಿತರ ಬಳಗದ ವತಿಯಿಂದ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸಲಾಯಿತು.

ಪ.ಪಂ. ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚು ರಂಜನ್ ಪೌರಕಾರ್ಮಿಕರಿಗೆ ಬಟ್ಟೆ ವಿತರಿಸಿದರು. ಇದೇ ಸಂದರ್ಭ ಕೋವಿಡ್-19 ಸೋಂಕು ಹರಡದಂತೆ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಪ್ರಮುಖರಾದ ಸೋಮೇಶ್, ಶ್ರೀಕಾಂತ್, ಮಧು, ಆನಂದ್, ಎಸ್‍ಬಿಐ ಮತ್ತು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಾದ ಸತೀಶ್, ಶಿವರಾಜ್ ಉಪಸ್ಥಿತರಿದ್ದರು.ಗೋಣಿಕೊಪ್ಪಲು: ಬ್ಯಾಂಕ್ ಆಫ್ ಬರೋಡದ ಗೋಣಿಕೊಪ್ಪ ಹಾಗೂ ಕೈಕೇರಿ ಶಾಖೆಯ ವತಿಯಿಂದ ವಿಶೇಷಚೇತನ ಹಾಗೂ ಕಡು ಬಡತನದಲ್ಲಿರುವ, ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಗೋಣಿಕೊಪ್ಪಲುವಿನ ಬ್ಯಾಂಕ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ವ್ಯವಸ್ಥಾಪಕ ಭೂಷಣ್ ಪಾಟೀಲ್ ಮಾತನಾಡಿ, ಇಂತಹ ಕಠಿಣ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಜನತೆಗೆ ಸಹಾಯಕವಾಗಲು ಬ್ಯಾಂಕ್ ವತಿಯಿಂದ ಅರ್ಹರಿಗೆ ಸಹಾಯ ಹಸ್ತ ನೀಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕೈಕೇರಿ ಶಾಖೆಯ ವ್ಯವಸ್ಥಾಪಕ ಹರೀಶ್ ನಾಯಕ್, ಬ್ಯಾಂಕ್‍ನ ಕೃಷಿ ಅಧಿಕಾರಿ ನಾಗರಾಜ್ ತಿವಾರಿ, ಸಹಾಯಕ ವ್ಯವಸ್ಥಾಪಕ ತಿರುವಲೈ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಬ್ಯಾಂಕಿನ ಸಿಬ್ಬಂದಿಗಳಾದ ವಿನೇಶ್, ಅನೂಪ್, ಉತ್ತಪ್ಪ ಇನ್ನಿತರರು ಹಾಜರಿದ್ದರು.ಸೋಮವಾರಪೇಟೆ: ಕೊಡಗು ಜಿಲ್ಲಾ ಜಾನಪದ ಪರಿಷತ್ ಮತ್ತು ತಾಲೂಕು ಹಾಗೂ ಹೋಬಳಿ ಘಟಕಗಳ ಆಶ್ರಯದಲ್ಲಿ ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಮೂಲಕ ಸೋಮವಾರಪೇಟೆಯ 138 ಆಟೋ ಚಾಲಕ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು.

ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿಗಳು ಭಾಗವಹಿಸಿ ಆಟೋ ಚಾಲಕರಿಗೆ ಕಿಟ್‍ಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಸಮಯದಲ್ಲಿ ಆಶ್ರಮಗಳ ಮೂಲಕ ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಜಿಲ್ಲೆಯ ವಿವಿಧೆಡೆಯಲ್ಲಿ ಆಶ್ರಮದ ಮೂಲಕ ಆಹಾರ ಸಾಮಗ್ರಿ ವಿತರಿಸಲಾಗಿದೆ ಎಂದರು.

ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ರಾಮಕೃಷ್ಣ ಶಾರದಾಶ್ರಮದಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸುತ್ತಿರುವದು ಶ್ಲಾಘನೀಯ ಕಾರ್ಯ. ಮಠ, ಆಶ್ರಮಗಳು ಸೇವೆಯ ಕೇಂದ್ರಗಳು ಎಂಬದನ್ನು ಶಾರದಾಶ್ರಮ ನಿರೂಪಿಸಿದೆ. ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಸಮಾಜದ ಜತೆಗೆ ಕೈಜೋಡಿಸಿರುವದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾನಪದ ಪರಿಷತ್‍ನ ಜಿಲ್ಲೆ ಹಾಗೂ ಹೋಬಳಿ ಘಟಕದ ಮನವಿಯ ಮೇರೆ ಆಶ್ರಮದಿಂದ ಖುದ್ದು ಸ್ವಾಮೀಜಿಗಳೇ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಟೋ ಚಾಲಕರು ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಸರ್ಕಾರದ ಆದೇಶಗಳನ್ನು ಪಾಲಿಸುವ ಮೂಲಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ತಹಶೀಲ್ದಾರ್ ಗೋವಿಂದರಾಜು, ಆಶ್ರಮದ ಗೋಪೇಂದ್ರನಂದಜೀ, ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ಸದಾನಂದ್, ಜಾನಪದ ಪರಿಷತ್‍ನ ಜಿಲ್ಲಾ ಉಪಾಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಖಜಾಂಚಿ ಸಂಪತ್‍ಕುಮಾರ್, ಹೋಬಳಿ ಅಧ್ಯಕ್ಷ ಎಸ್.ಎ. ಮುರುಳೀಧರ್, ತಾಲೂಕು ಕಾರ್ಯದರ್ಶಿ ವಿಜಯ್ ಹಾನಗಲ್, ಹೋಬಳಿ ಉಪಾಧ್ಯಕ್ಷ ನ.ಲ. ವಿಜಯ, ಕಾರ್ಯದರ್ಶಿ ಎಂ.ಎ. ರುಬೀನಾ, ನಿರ್ದೇಶಕ ಪ್ರಕಾಶ್, ಸುದರ್ಶನ್, ದಾಮೋದರ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೋಹನ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.