ಪೆÇನ್ನಂಪೇಟೆ, ಮೇ 15: ಕಳೆದ ತಿಂಗಳು ನಿಗೂಢವಾಗಿ ನಾಪತ್ತೆಯಾಗಿ 5 ದಿನಗಳ ಬಳಿಕ ಶವವಾಗಿ ಪತ್ತೆಯಾದ ಗುಂಡಿಕೆರೆಯ ಮೂಸ ಅವರ ನಿಗೂಢ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಪೆÇಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಈ ಕುರಿತು ಡಿ.ಸಿ.ಸಿ. ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಅವರ ನೇತೃತ್ವದ ನಿಯೋಗ ತಾ. 15 ರಂದು ಮಡಿಕೇರಿಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಕಳೆದ ತಿಂಗಳ 7ರಂದು ಎತ್ತು ಖರೀದಿಸಲೆಂದು ಮನೆಯಿಂದ ತೆರಳಿದ ಗುಂಡಿಕೆರೆಯ ಬೇಟೋಳಿ ಗ್ರಾಮದ ಎಂ.ಎಂ. ಮೂಸ ಅವರು ಅಂದು ಮನೆಗೆ ಮರಳಿ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ನಾಪತ್ತೆಯಾದ ಐದು ದಿನಗಳ ಬಳಿಕ ಬಿಟ್ಟಂಗಾಲ ಸಮೀಪದ ಕೊಳತೋಡು ಗ್ರಾಮದ ಕಾಫಿ ತೋಟದಂಚಿನ ಮರವೊಂದರ ಕೆಳಗೆ ಅವರ ಶವ ಪತ್ತೆಯಾಗಿತ್ತು.

ಮೂಸ ಅವರು ಕಾಣೆಯಾದ ಬಗ್ಗೆ ಏಪ್ರಿಲ್ 8ರಂದು ವೀರಾಜಪೇಟೆ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಅಲ್ಲಿನ ಸಬ್‍ಇನ್ಸ್‍ಪೆಕ್ಟರ್ ಮರಿಸ್ವಾಮಿ ಆರಂಭದಿಂದಲೇ ಪ್ರಕರಣದ ಕುರಿತು ನಿರ್ಲಕ್ಷ್ಯವಹಿಸಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಆದ್ದರಿಂದ ಅವರು ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಮಂಜುನಾಥ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ಎಸ್ಪಿ ಅವರ ಬಳಿ ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಡಾ. ಸುಮನ್ ಡಿ.ಪಿ. ಅವರು, ತನಿಖೆ ಪ್ರಗತಿಯಲ್ಲಿದೆ. ಮೃತರ ಮರಣೋತ್ತರ ಪರೀಕ್ಷೆಯ ಎಫ್.ಎಸ್.ಎಲ್. ವರದಿ ಬಂದ ಕೂಡಲೇ ಅದನ್ನು ಸಮಗ್ರವಾಗಿ ಪರಿಶೀಲಿಸಿ ತನಿಖೆಯನ್ನು ಮುಂದುವರಿಸಲಾಗುವುದು ಎಂದು ನಿಯೋಗಕ್ಕೆ ಎಸ್ಪಿ ಅವರು ಭರವಸೆ ನೀಡಿದರು.

ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬ್ದುಲ್ ರಹಿಮಾನ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಎಂ.ಎ. ಉಸ್ಮಾನ್, ಕಾರ್ಮಿಕ ಘಟಕದ ಕಾರ್ಯದರ್ಶಿ ಅಜ್ಜಳ್ಳಿ ರವಿ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹೊಸೂರು, ಮೃತ ಮೂಸ ಅವರ ಪುತ್ರ ಎಂ.ಎಂ. ಸಲಾಂ, ಸಹೋದರ ಎಂ.ಎಂ. ಸಾದಲಿ ಹಾಗೂ ಇತರರು ಪಾಲ್ಗೊಂಡಿದ್ದರು.