ಕುಶಾಲನಗರ, ಮೇ 15: ಅಂತರರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಅಂಗವಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿಕೆ ಮಾಡುವ ಮೂಲಕ ಆಚರಿಸಲಾಯಿತು.
ಕೇಂದ್ರದ ಶುಶ್ರೂಷಕಿಯರಿಗೆ ಶುಭಾಶಯ ಹೇಳಿದ ವೈದ್ಯ ಡಾ. ಮಧುಸೂದನ್, ಮನುಷ್ಯರ ಬದುಕಿನಲ್ಲಿ ನೆಮ್ಮದಿ ಮೂಡಿಸುತ್ತಿರುವ ಶುಶ್ರೂಷಕಿಯರ ಬದುಕು ಹಸನಾಗಲಿ ಎಂದು ಹಾರೈಸಿದರು.
ಡಾ. ಪ್ರತಿಭಾ, ಆರೋಗ್ಯ ಮೇಲ್ವಿಚಾರಕಿ ಮಂಜುಳಾ, ಹಿರಿಯ ಆರೋಗ್ಯ ಸಹಾಯಕರಾದ ನಿರ್ಮಲಾ, ಡಿ.ಎಂ. ಸುಶೀಲಾ, ಬಿ.ಡಿ. ಗೌರಮ್ಮ, ಶುಶ್ರೂಷಕಿಯರಾದ ನೇತ್ರಾವತಿ, ಚಿತ್ರಾ, ಸವಿತಾ, ತುಳಸಿಮಣಿ, ಉಮಾವತಿ ಇದ್ದರು. ಆಸ್ಪತ್ರೆ ಸಿಬ್ಬಂದಿಗಳು ಶುಶ್ರೂಷಕಿಯರ ಮೇಲೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.