ಕೂಡಿಗೆ, ಮೇ 14: ಕುಶಾಲನಗರ ಅರಣ್ಯ ವಲಯಾದ ಬೆಂಡೆಬೆಟ್ಟ ಮತ್ತು ಆನೆಕಾಡು ವ್ಯಾಪ್ತಿಯಿಂದ ಕಳೆದ ಮೂರು ತಿಂಗಳುಗಳಿಂದ ಹುದುಗೂರು, ಮದಲಾಪುರ, ಸೀಗೆಹೂಸೂರು ವ್ಯಾಪ್ತಿಯಲ್ಲಿ ಕಾಡಾನೆಗಳು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ಸಂರ್ಪೂಣವಾಗಿ ತುಳಿದು ನಷ್ಟಪಡಿಸಿದವು.

ಈ ವ್ಯಾಪ್ತಿಯ ರೈತರ ದೂರಿನ ಮೇರೆಗೆ ಆಯಾ ಪ್ರದೇಶಗಳಿಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ತಾಲೂಕು ಮಟ್ಟದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ಹಾವಾಳಿ ತಡೆಗೆ ಸ್ಥಳ ಪರಿಶೀಲನೆ ಮಾಡಿ ಸೋಲಾರ್ ವಿದ್ಯುತ್ ಬೇಲಿಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಇಂದು ಹಾರಂಗಿ ತೋಟಗಾರಿಕೆ ಇಲಾಖೆಯ ಸಮೀಪದಿಂದ ಕೂಡಿಗೆ ಸೈನಿಕ ಶಾಲೆಯ ಸಮೀಪದ ಹಾರಂಗಿ ನದಿ ದಡದ ಅಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿ ಅಳವಡಿಕೆಗೆ ಅರಣ್ಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯ ನಡೆಯಿತು ಈ ಸಂದರ್ಭ ಹುದುಗೂರು ಮತ್ತು ಹೆಬ್ಬಾಲೆ ಉಪವಲಯ ಅರಣ್ಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.