ಮಡಿಕೇರಿ, ಮೇ 13: ಇಂಜಿನಿಯರಿಂಗ್ ಶಾಲೆಗಳಿಗೆ ಪ್ರವೇಶಿಸಲು ಪ್ರತೀ ವರ್ಷ ನಡೆಯುವ ಕರ್ನಾಟಕ ಸಿ.ಇ.ಟಿ. ಪರೀಕ್ಷೆ ಲಾಕ್‍ಡೌನ್ ಹಿನ್ನೆಲೆ ಮುಂದೂಡಲ್ಪಡುತ್ತಾ ಬಂದಿದ್ದು, 2020 ಜುಲೈ 30 ಹಾಗೂ 31 ರಂದು ನಡೆಸಲು ತೀರ್ಮಾನಿಸಲಾಗಿದೆ.
ಪರೀಕ್ಷೆಗೆ ನೋಂದಣಿ ಮಾಡಲು ತಾ. 18 ರ ತನಕ ಸಮಯಾವಕಾಶವನ್ನು ಕರ್ನಾಟಕ ಪರೀಕ್ಷಾ ಮಂಡಳಿ ಇತ್ತೀಚೆಗೆ ನೀಡಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ, ರಾಜ್ಯಾದ್ಯಂತ 62,000 ಸರಕಾರಿ ಸೀಟ್‍ಗಳು ಇಂಜಿನಿಯರಿಂಗ್ ಕಾಲೇಜುಗಳಲ್ಲಿವೆ. ಈಗಾಗಲೇ 1.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗು ವುದು ಎಂದರು. ಹೆಚ್ಚಿನ ಮಾಹಿತಿ hಣಣಠಿs://ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ/ಞeಚಿ/ ನಲ್ಲಿ ಲಭ್ಯವಿದೆ.