ಮಡಿಕೇರಿ, ಮೇ 12: ಲಾಕ್‍ಡೌನ್ ಸಡಿಲಿಕೆಗೊಂಡ ನಂತರ 2 ಚೆಕ್‍ಪೋಸ್ಟ್‍ಗಳ ಮೂಲಕ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯವರು ಅಧಿಕೃತ ಈ-ಪಾಸ್‍ಗಳನ್ನು ಪಡೆದುಕೊಂಡು ಜಿಲ್ಲೆಯ ಗಡಿಭಾಗಗಳಾದ ಕೊಪ್ಪ ಹಾಗೂ ಸಂಪಾಜೆ ಗೇಟ್‍ಗಳ ಮೂಲಕ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೊರ ರಾಜ್ಯಗಳಿಂದ ಬರು ವವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಗಳಾದ ಹಾಸ್ಟೆಲ್ ಅಥವಾ ಹೊಟೇಲ್‍ಗಳನ್ನು ಬಳಸಲಾಗುತ್ತಿದೆ. ಹೊರಜಿಲ್ಲೆಗಳಿಂದ ಬಂದವರಿಗೆ ಮನೆಯಲ್ಲಿಯೇ ಇರಲು ಸಲಹೆ ನೀಡಲಾಗಿದೆ ಎಂದು ಸಂಪಾಜೆ ಗಡಿ ಉಸ್ತುವಾರಿ ತಾ.ಪಂ ಇ.ಒ. ಲಕ್ಷ್ಮೀ ಮಾಹಿತಿ ನೀಡಿದ್ದಾರೆ. ಹೊರ ರಾಜ್ಯ ಗಳಾದ ಗುಜರಾತ್, ಮಹಾರಾಷ್ಟ್ರ, ನವದೆಹಲಿ, ತಮಿಳುನಾಡುಗಳಲ್ಲಿ ಸೋಂಕಿತರ ಸಂಖ್ಯೆ ಅತೀ ಹೆಚ್ಚು ಇರುವ ಕಾರಣ, ಈ ರಾಜ್ಯಗಳಿಂದ ಬಂದವರನ್ನು ‘ಊigh ಖisಞ’ ಎಂದು ಗುರುತಿಸಿ ಪ್ರತ್ಯೇಕ ಕ್ವಾರಂಟೈನ್ ವ್ಯವಸ್ಥೆ ಮಾಲಾಗುತ್ತಿದೆ. ಇತರ ರಾಜ್ಯಗಳಿಂದ ಬಂದವರನ್ನು ‘ಐoತಿ ಖisಞ’ಎಂದು ಗುರುತಿಸಿ ಕ್ವಾರಂಟೈನ್‍ನಲ್ಲಿರಿಸ ಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗಂಡಸರು ಹಾಗೂ ಹೆಂಗಸರಿಗೆ ಪ್ರತ್ಯೇಕ ಕ್ವಾರಂಟೈನ್ ವ್ಯವಸ್ಥೆ ಇದೆ. ಒಂದೆ ಕುಟುಂಬದವ ರಾಗಿದ್ದಲ್ಲಿ ಒಂದೇ ಕೊಠಡಿಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಇದೆ ಎಂದು ಕೂಡ ತಿಳಿಸಿದರು.ಹೊರ ರಾಜ್ಯದಿಂದ ಬಂದ ಮಂದಿಯನ್ನು ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ, ಕ್ವಾರಂಟೈನ್ ಕೇಂದ್ರಗಳಾದ ಹೊಟೇಲ್ ಹಾಗೂ ಹಾಸ್ಟೆಲ್‍ಗಳಿಗೆ ಕಳುಹಿಸಿ ಕೊಡಲಾಗುತ್ತಿದೆ.ಯಾರು ಯಾರಿಗೆ ಎಲ್ಲಿ ಕ್ವಾರಂಟೈನ್? ಜಿಲ್ಲೆಗೆ, ಹೊರರಾಜ್ಯಗಳಿಂದ ಕೊಪ್ಪ ಗೇಟ್ ಮೂಲಕ ಆಗಮಿಸು ವವರಿಗೆ ಕುಶಾಲನಗರದ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ ಹಾಗೂ ಸಂಪಾಜೆ ಮೂಲಕ ಆಗಮಿಸು ವವರನ್ನು ಮಡಿಕೇರಿಯ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ.

ಹೊಟೇಲ್‍ನಲ್ಲಿ ತಂಗಲು ನಿಗದಿತ ದರ ನೀಡಬೇಕು

ಹಾಸ್ಟೆಲ್‍ನಲ್ಲಿ ತಂಗಲು ಯಾವುದೇ ದರ ನೀಡಬೇಕಾಗಿಲ್ಲ. ಆದರೆ ಹೊಟೇಲ್‍ಗಳಲ್ಲಿ ತಂಗಲು ಇಚ್ಚಿಸುವವರು ಸಂಬಂಧಿಸಿದ ಹೊಟೇಲ್‍ಗಳಿಗೆ 750 ಅಥವಾ 950 ಅಂತೆ ಒಟ್ಟು 14 ದಿನಗಳ ಮುಂಗಡ ಹಣ ಪಾವತಿಸಿ ವಸತಿ ಹಾಗೂ ಊಟದ ವ್ಯವಸ್ಥೆ ಪಡೆದು ಕೊಳ್ಳಬೇಕೆಂದು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದ್ದಾರೆ. ಹಾಸ್ಟೆಲ್‍ಗಳಲ್ಲಿ ಎಸ್.ಡಿ.ಆರ್.ಎಫ್ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೊಟೇಲ್‍ನಲ್ಲಿ ತಂಗಿದ್ದವರಿಗೆ ಹೊಟೇಲ್ ಮೂಲಕ ಪಾರ್ಸಲ್ ವ್ಯವಸ್ಥೆಯಲ್ಲಿ ಆಹಾರ ಪೂರೈಕೆ ಆಗುತ್ತಿದೆ. ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ಹೊಟೇಲ್‍ನಲ್ಲಿಯೇ ಇರಿಸಲಾಗುವುದು ಎಂದು ಮಡಿಕೇರಿ ತಾ.ಪಂ ಇ.ಒ ಲಕ್ಷ್ಮೀ ತಿಳಿಸಿದ್ದಾರೆ.

ಗರ್ಭಿಣಿಯರಿಗೆ ಮನೆಯಲ್ಲೇ ಕ್ವಾರಂಟೈನ್

ಹೊರ ರಾಜ್ಯದಿಂದ ಆಗಮಿಸುವ 7,8 ಹಾಗೂ 9 ತಿಂಗಳ ಗರ್ಭಿಣಿಯರಿಗೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಇವರು ಗಳಿಗೆ ಯಾವುದೇ ತೊಂದರೆ ಗಳಾಗದಂತೆ, ಆರೋಗ್ಯ ಹಾಗೂ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸ ಲಾಗುತ್ತಿದೆ. ಹಾಗೆಯೇ ಅನಾರೋಗ್ಯ ದಿಂದ ಬಳಲುತ್ತಿರುವವರನ್ನು ಹಾಗೂ ವೃದ್ಧರಿಗೆ ಕ್ವಾರಂಟೈನ್ ಕೇಂದ್ರ ಗಳಲ್ಲಿಯೇ ವಿಶೇಷ ಕಾಳಜಿ ತೋರಿಸ ಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮನೆಯಲ್ಲಿರುವ ವಸ್ತುಗಳ ಪೂರೈಕೆ

ಹೊರರಾಜ್ಯದಿಂದ ಬಂದು ಹಾಸ್ಟೆಲ್ ಅಥವಾ ಹೊಟೇಲ್‍ಗಳಲ್ಲಿ ರುವವರಿಗೆ ಮನೆಯಿಂದ ಯಾವುದಾದರೂ ವಸ್ತು ಬೇಕಿದ್ದಲ್ಲಿ ಮನೆಯವರು

(ಮೊದಲ ಪುಟದಿಂದ) ಅದನ್ನು ಹೊಟೇಲ್ ಅಥವಾ ಹಾಸ್ಟೆಲ್ ಮುಂಭಾಗದಲ್ಲಿ ತಂದು ಇಡಬೇಕು. ನಂತರ ಅದನ್ನು ತಲುಪಬೇಕಾದವರ ಕೊಠಡಿ ಮುಂದೆ ಇಟ್ಟು ಸ್ವೀಕರಿಸುವಂತೆ ತಿಳಿಸಲಾಗಿದೆ. ಅಗತ್ಯ ವಸ್ತುಗಳಾದ ಔಷಧಿ ಹಾಗೂ ಕೆಲಸ ಸಂಬಂಧ ‘ವರ್ಕ್ ಫ್ರಮ್ ಹೋಮ್’ಗೆ ಬೇಕಾಗುವ ಲ್ಯಾಪ್‍ಟಾಪ್ ಅನ್ನು ನೀಡಬಹುದು. ಇವುಗಳನ್ನು ನೀಡಲು ಬರಿ ಒಂದೇ ಬಾರಿ ಅವಕಾಶವಿದೆ. ಕ್ವಾರೆಂಟೈನ್ ಆದವರನ್ನು ಅನಗತ್ಯವಾಗಿ ಭೇಟಿ ಮಾಡಲು ಅವಕಾಶವಿರುವುದಿಲ್ಲ ಎಂದು ಲಕ್ಷ್ಮೀ ತಿಳಿಸಿದ್ದಾರೆ.

14 ದಿನಗಳ ನಂತರ ಗಂಟಲು ದ್ರವ ಪರೀಕ್ಷೆ ಕಡ್ಡಾಯ

ಹೊರರಾಜ್ಯದಿಂದ ಬಂದ ಮಂದಿ 14 ದಿನ ಕ್ವಾರಂಟೈನ್ ಪೂರೈಸಿದ ನಂತರ ಕಡ್ಡಾಯವಾಗಿ ಅವರುಗಳ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಪರೀಕ್ಷೆಯ ವರದಿ ಬರುವ ತನಕ ಅವರುಗಳು ಕ್ವಾರಂಟೈನ್‍ನಲ್ಲೇ ಇರಬೇಕಾಗಿದೆ ಎಂದು ಜಿಲ್ಲಾಧೀಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ದಿನಕ್ಕೆ 2 ಬಾರಿ ತಪಾಸಣೆ

ಕ್ವಾರಂಟೈನ್‍ನಲ್ಲಿರುವವರನ್ನು ದಿನಕ್ಕೆ ಎರಡು ಬಾರಿ ಆರೋಗ್ಯ ಇಲಾಖೆಯವರಿಂದ ತಪಾಸಣೆ ನಡೆಸಲಾಗುತ್ತಿದೆ. ಪೊಲೀಸರು ಹಾಗೂ ನೋಡಲ್ ಅಧಿಕಾರಿಗಳು ಪ್ರತಿದಿನ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕ್ವಾರಂಟೈನ್ ನಲ್ಲಿರುವವರಿಗೆ ಅಧಿಕಾರಿಗಳದ್ದೇ ಮೊಬೈಲ್ ಸಂಖ್ಯೆ ನೀಡಿದ್ದು, ತುರ್ತು ಸಂದರ್ಭ ಅಧಿಕಾರಿಗಳನ್ನು ಸಂಪರ್ಕಿಸ ಬಹುದೆಂದು ಲಕ್ಷ್ಮೀ ತಿಳಿಸಿದ್ದಾರೆ.

ಕುಶಾಲನಗರ : ಕೊಡಗು ಜಿಲ್ಲೆಗೆ ಕುಶಾಲನಗರ ಕೊಪ್ಪ ಗಡಿ ಮೂಲಕ ಪ್ರವೇಶಿಸುವ ಅಂತರ್‍ರಾಜ್ಯದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ಕುಶಾಲನಗರದಲ್ಲಿ ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತಿದೆ. ಕುಶಾಲನಗರದ ವಸತಿ ನಿಲಯಗಳಲ್ಲಿ, ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ. ಅಲ್ಲದೆ ಕುಶಾಲನಗರದ ಮೂರು ಖಾಸಗಿ ಲಾಡ್ಜ್‍ಗಳಲ್ಲಿ ವೈಯಕ್ತಿಕವಾಗಿ ಖರ್ಚು ವೆಚ್ಚ ಭರಿಸುವ ಹೊರ ರಾಜ್ಯದ ಪ್ರಯಾಣಿಕರನ್ನು ಇರಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.

ರಾಜ್ಯ ಸರಕಾರದ ಆದೇಶದಂತೆ ಗೋವಾ ರಾಜ್ಯದ ಪ್ರಯಾಣಿಕರನ್ನು ಹೊರತುಪಡಿಸಿ ಇನ್ನುಳಿದಂತೆ ದೇಶದ ಇತರ ಎಲ್ಲಾ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ನಾಗರಿಕರನ್ನು ಕ್ವಾರಂಟೈನ್‍ಗೆ ಒಳಪಡಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ಗೋವಾದಿಂದ ಬರುವ ಪ್ರಜೆಗಳು ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದು ಕೂಡ ಅವಶ್ಯವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.

ಈಗಾಗಲೇ ಕುಶಾಲನಗರ ಕ್ವಾರಂಟೈನ್ ಕೇಂದ್ರಗಳಲ್ಲಿ ಒಟ್ಟು 66 ಮಂದಿಯನ್ನು ಇರಿಸಲಾಗಿದ್ದು 3 ಲಾಡ್ಜ್‍ಗಳಲ್ಲಿ 15 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇವರಲ್ಲಿ ವಸತಿ ನಿಲಯಗಳಲ್ಲಿ ಇರಿಸಿರುವ ಜನರಿಗೆ ಸರಕಾರ ವೆಚ್ಚ ಭರಿಸುತ್ತದೆ. ಆದರೆ ಖಾಸಗಿ ಲಾಡ್ಜ್‍ನಲ್ಲಿ ಇರುವ ಜನರಿಗೆ ಸ್ವತಃ ವೆಚ್ಚ ಭರಿಸಬೇಕಾಗಿದೆ. ಇವರುಗಳನ್ನು ದಿನನಿತ್ಯ ವೈದ್ಯರ ತಂಡ ಆರೋಗ್ಯ ತಪಾಸಣೆಗೆ ಒಳಪಡಿಸುತ್ತಿದ್ದು ಪ್ರಥಮ ದಿನ ಗಂಟಲು ದ್ರವ ಪಡೆದು ಪರೀಕ್ಷೆ ಕಳುಹಿಸಲಾಗುತ್ತಿದೆ. ನಂತರ 14ನೇ ದಿನ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಮ್ಮು, ಶೀತ ಕಂಡುಬಂದಲ್ಲಿ ತಕ್ಷಣ ಕ್ವಾರಂಟೈನ್ ಕೇಂದ್ರದಿಂದ ಅವರನ್ನು ಮಡಿಕೇರಿ ಸೋಂಕು ತಪಾಸಣಾ ಕೇಂದ್ರಕ್ಕೆ ರವಾನಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಪ್ರತಿ ದಿನ ಎರಡು ಪಾಳಿಗಳಲ್ಲಿ ಶಾಲಾ ಶಿಕ್ಷಕ, ಶಿಕ್ಷಕಿಯರನ್ನು ನಿಯೋಜಿಸಲಾಗಿದೆ. ಯಾವುದೇ ಕುಟುಂಬ ಸದಸ್ಯರು ಹೊರಗಿನಿಂದ ಆಹಾರ ಪದಾರ್ಥಗಳನ್ನು ನೀಡುವುದಾಗಲಿ, ಕ್ವಾರಂಟೈನ್‍ಗೆ ಒಳಗಾದವರ ಸಂಪರ್ಕಕ್ಕೆ ಅನುಮತಿ ಇರುವುದಿಲ್ಲ ಎಂದು ತಿಳಿಸಿರುವ ಕೋವಿಡ್-19 ಕೇಂದ್ರದ ಪ್ರಮುಖರು ಹೊರ ರಾಜ್ಯದಿಂದ ಬಂದ ಒಂದೇ ಕುಟುಂಬದ ಸದಸ್ಯರು ಒಂದೇ ಕೊಠಡಿಯಲ್ಲಿ ಇರಲು ಅವಕಾಶವಿದೆ. ಅವರುಗಳ ವಾಹನಗಳನ್ನು ನಿಲುಗಡೆಗೊಳಿಸಲು ಕೂಡ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದಾರೆ.

ಕೊನೆಯ ದಿನ ಗಂಟಲು ದ್ರವ ಪರೀಕ್ಷೆ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ತಡವಾಗುವ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳ ಸಭೆ ಬುಧವಾರ ನಡೆಯಲಿದ್ದು, ಈ ಬಗ್ಗೆ ಚಿರ್ಚಿಸಲಾಗುವುದು ಎಂದು ಡಾ.ಶ್ರೀನಿವಾಸ್ ತಿಳಿಸಿದ್ದಾರೆ.

ಇನ್ನುಳಿದಂತೆ ರಾಜ್ಯದ ಅಂತರ್ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಆಗಮಿಸಿದ ಜನರನ್ನು ಹೋಂ ಕ್ವಾರೆÀಂಟೈನ್‍ಗೆ ಒಳಪಡಿಸಲಾಗಿದ್ದು ಅವರುಗಳನ್ನು ಅಲ್ಲಲ್ಲಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಅಧಿಕಾರಿಗಳು ಆಶಾ ಕಾರ್ಯಕರ್ತರು ಮನೆಮನೆಗೆ ತೆರಳಿ ರೋಗದ ತಪಾಸಣೆಗೆ ಒಳಪಡಿಸುವರು.

ಜಿಲ್ಲೆಗೆ ಪ್ರವೇಶಿಸುವ ಪ್ರತಿಯೊಬ್ಬ ನಾಗರಿಕನನ್ನು ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸಿ ದಿನನಿತ್ಯ ಪರಿಶೀಲನೆ ಒಳಪಡಿಸಲಾಗುತ್ತಿದೆ ಎಂದು ಕುಶಾಲನಗರ ಗಡಿ ಉಸ್ತುವಾರಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಸುಂಟಿಕೊಪ್ಪ ಮತ್ತು ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ವ್ಯಾಪ್ತಿಯ ಕಂದಾಯ ಅಧಿಕಾರಿಗಳು, ನೌಕರರು ದಿನದ 24 ಗಂಟೆಗಳ ಕಾಲ ಕುಶಾಲನಗರ ಗಡಿಭಾಗದ ಕೋವಿಡ್-19 ಆರೋಗ್ಯ ತಪಾಸಣಾ ಕೇಂದ್ರದಲ್ಲಿ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಕಲೆ ಹಾಕುವುದರಲ್ಲಿ ನಿರತರಾಗಿರುವ ದೃಶ್ಯ ಕಾಣಬಹುದು.

ಸೋಮವಾರಪೇಟೆ ತಾಲೂಕಿನ ಒಟ್ಟು 302 ಜನ ಆರೋಗ್ಯ ಇಲಾಖೆ ಅಧಿಕಾರಿಗಳು, ನೌಕರರು ಕೋವಿಡ್-19 ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮಾಹಿತಿ ನೀಡಿದ್ದು 29 ವೈದ್ಯರು, 186 ಸಿ ಗ್ರೂಪ್ ನೌಕರರು, 87 ಡಿ ಗ್ರೂಪ್ ನೌಕರರು, 192 ಆಶಾ ಕಾರ್ಯಕರ್ತರು, 294 ಅಂಗನವಾಡಿ ಕಾರ್ಯಕರ್ತರು ಕೂಡ ದಿನನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಇತರೆಡೆ

ಹೈದರಾಬಾದ್‍ನಿಂದ ವೀರಾಜಪೇಟೆಗೆ ಬಂದ ನಾಲ್ಕು ಮಂದಿಯನ್ನು ನಿನ್ನೆ ರಾತ್ರಿ ಸಾಂಸ್ಥಿಕ ಕ್ವಾರಂಟೈನ್‍ಗಾಗಿ ಸ್ಥಳಾಂತರಿಸಲಾಗಿದೆ. ಈಗಾಗಲೇ ಸಾಂಸ್ಥಿಕ ಕ್ವಾರಂಟೈನ್‍ಗೆ ಕುಟ್ಟದಲ್ಲಿ 3, ಬಾಳೆಲೆ 3, ಹುದಿಕೇರಿ 6, ತಿತಿಮತಿ 4, ಗೋಣಿಕೊಪ್ಪ, ಪಾಲಿಬೆಟ್ಟ ಸೇರಿದಂತೆ 21, ಅಮ್ಮತ್ತಿ 3 ಹಾಗೂ ವೀರಾಜಪೇಟೆ ಹಾಸ್ಟೆಲ್‍ನಲ್ಲಿ 2 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್ ಗೊಳಪಡಿಸ ಲಾಗಿದೆ ಎಂದು ತಹಶೀಲ್ದಾರ್ ಎಂ.ಎಲ್. ನಂದೀಶ್ ತಿಳಿಸಿದ್ದಾರೆ. ಎಲ್ಲರಿಗೂ ಪ್ರಥಮ ಹಂತದ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಹೇಳಿದರು.

-ಚಂದ್ರಮೋಹನ್, ಡಿ.ಎಂ.ಆರ್.