ಕುಶಾಲನಗರ, ಮೇ 12: ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ಕಾವೇರಿ ನದಿಯಲ್ಲಿ ಮೈಸೂರು ಜಿಲ್ಲೆಗೆ ಸೇರಿದ ವ್ಯಕ್ತಿಯೊಬ್ಬನ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಹನಗೋಡು ಗ್ರಾಮದ ಹೆಜ್ಜಾರು ಬಳಿಯ ಕೃಷಿಕ ಸುರೇಶ್ (48) ಮೃತಪಟ್ಟ ವ್ಯಕ್ತಿ ಎಂದು ಪತ್ತೆಯಾಗಿದೆ.
ನಾಲ್ಕು ದಿನಗಳ ಹಿಂದೆ ಕುಶಾಲನಗರ ಕಡೆಗೆ ಶುಂಟಿ ಔಷಧಿ ಖರೀದಿಸಲು ತನ್ನ ಬೈಕ್ (ಕೆಎ 45 ಎಕ್ಸ್ 5003)ರಲ್ಲಿ ಬಂದಿದ್ದು ಬೈಕ್ ಅನ್ನು ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ಬಳಿ ಇರಿಸಿ ಸಮೀಪದ ಕಾವೇರಿ ನದಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.