ಸೋಮವಾರಪೇಟೆ, ಮೇ 12: ಲಾಕ್‍ಡೌನ್ ಹಿನ್ನೆಲೆ ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳು ಇಲ್ಲದಿರುವದರಿಂದ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದು ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸೋಮವಾರಪೇಟೆ ಪುಷ್ಪಗಿರಿ ಛಾಯಾಗ್ರಾಹಕರ ಸಂಘ ಆಗ್ರಹಿಸಿದೆ.

ಈ ಬಗ್ಗೆ ಸಂಘದ ಪದಾಧಿಕಾರಿ ಗಳು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಸಾಲ ಮಾಡಿ ಸ್ಟುಡಿಯೋ ಹಾಗೂ ದೊಡ್ಡ ಮೊತ್ತದ ಕ್ಯಾಮೆರಾ ಗಳನ್ನು ಖರೀದಿಸಲಾಗಿದ್ದು, ಸಾಲದ ಕಂತು ಕಟ್ಟಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಬೇರೆ ವೃತ್ತಿಪರರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಈ ಸೌಲಭ್ಯವನ್ನು ಛಾಯಾಗ್ರಾಹಕರಿಗೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿ ದ್ದಾರೆ. ಛಾಯಾಗ್ರಾಹಕರನ್ನು ಕಾರ್ಮಿಕ ಇಲಾಖಾ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ಸರಕಾರದ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಪದಾಧಿಕಾರಿಗಳು ಮನವಿ ಮಾಡಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಎಸ್. ಸುಬ್ರಮಣಿ, ಕಾರ್ಯದರ್ಶಿ ಎಸ್. ಡೇವಿಡ್, ಖಜಾಂಚಿ ಸುದೀಪ್, ಗೌರವಾಧ್ಯಕ್ಷ ಎಸ್.ಎನ್. ನಾಣಿ, ಜನಾರ್ಧನ್, ಶೇಷಪ್ಪ, ಧರ್ಮ, ಫಝಲ್, ವಿನೋದ್, ಭರತ್, ಬೋಜೇಗೌಡ, ವಸಂತ್, ಸುನಿಲ್ ಉಪಸ್ಥಿತರಿದ್ದರು.