ಕೂಡಿಗೆ, ಮೇ 12: ಕಣಿವೆ ಸಮೀಪ ಭುವನಗಿರಿ ಮತ್ತು ಕಣಿವೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ಇಂದು ಬೆಳಗ್ಗಿನ ಜಾವ 6 ಗಂಟೆ ವೇಳೆ ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ 5 ಗ್ರಾಮಗಳ ಗ್ರಾಮಸ್ಥರು ಭಯಭೀತರಾದ ಘಟನೆ ನಡೆಯಿತು.

ಕಾಡಾನೆಗಳು ಹುದುಗೂರು ಭಾಗದಿಂದ ಹಾರಂಗಿ ನಾಲೆ ರಸ್ತೆಯಲ್ಲಿ ಬಂದಿದ್ದು, ಬರುವ ದಾರಿಯಲ್ಲಿ ಅನೇಕ ರೈತರ ಬೆಳೆಯನ್ನು ಹಾಳು ಮಾಡಿವೆ. ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಆನೆಗಳನ್ನು ಜೇನುಕಲ್ಲು ಬೆಟ್ಟದತ್ತ ಓಡಿಸುವ ಕಾರ್ಯಾಚರಣೆ ನಡೆಸಿತು.

ಈ ಸಂದರ್ಭ ಹೆಬ್ಬಾಲೆ ಉಪವಲಯ ಅರಣ್ಯ ಅಧಿಕಾರಿ ಭರತ್, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.