ಕುಶಾಲನಗರ, ಮೇ 13: ಸೋಮವಾರಪೇಟೆ ತಾಲೂಕಿನ 26 ಗ್ರಾಮ ಪಂಚಾಯಿತಿಗಳಿಂದ 12 ರಾಜ್ಯಗಳ ಒಟ್ಟು 2390 ಮಂದಿ ಕಾರ್ಮಿಕರುಗಳು ದೇಶದ ವಿವಿಧ ರಾಜ್ಯಗಳಿಗೆ ತೆರಳಲು ಸಿದ್ಧರಾಗಿದ್ದಾರೆ. ತಮಿಳುನಾಡಿಗೆ 1,896 ಸೇರಿದಂತೆ ಎಲ್ಲ ಕಾರ್ಮಿಕರುಗಳು ಬಸ್‍ಗಳ ಮೂಲಕ ಇಲ್ಲಿಂದ ತಾ. 14 ರಂದು (ಇಂದು) ತೆರಳಲಿದ್ದಾರೆ ಎಂದು ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದ್ದಾರೆ.