ಕಣಿವೆ, ಮೇ 11: ಎಲ್ಲೆ ಮೀರಿದ ಆಧುನಿಕತೆ, ಮನುಕುಲವನ್ನೇ ವಿನಾಶದಂಚಿಗೆ ದೂಡಿರುವ ವೈಜ್ಞಾನಿಕತೆಗಳಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ಕೂಡ ಕೊಡಗು ಜಿಲ್ಲೆಯಲ್ಲಿರುವ ಸೂರ್ಲಬ್ಬಿ ನಾಡಿನ ಜನರು ಆಧುನಿಕ ಸೌಲಭ್ಯಗಳಿಲ್ಲದೇ ಸೊರಗಿ ಹೋಗಿದ್ದಾರೆ.ಕೊಡಗು ಜಿಲ್ಲೆಗೆ ವಿದ್ಯುತ್ ಬಂದ ತರುವಾಯ ಹಲವು ವಷರ್Àಗಳ ನಂತರ ಈ ನಾಡಿಗೆ ವಿದ್ಯುತ್ ಬಂತು. ಆದರೇನು ಬೆಟ್ಟ ಗುಡ್ಡಗಳ ಶ್ರೇಣಿಗಳೇ ತುಂಬಿರುವ ಈ ನಾಡಿನಲ್ಲಿ ಭೂಪದರದ ಉದ್ದಗಲಕ್ಕೂ ಬೆಳೆದು ನಿಂತ ಮರಗಿಡಗಳಿಂದಾಗಿ ಇಲ್ಲಿ ವಿದ್ಯುತ್ ಸರಬರಾಜು ದೊಡ್ಡ ಸಮಸ್ಯೆಯಾಗಿದ್ದು, ಈಗಲೂ ಇಲ್ಲಿನ ಜನ ವಿದ್ಯುತ್‍ಗೆ ಪರ್ಯಾಯ ಮಾರ್ಗೊಪಾಯದ ಮೊರೆ ಹೋಗಿದ್ದಾರೆ. ಇನ್ನು ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಅಂತೂ ಹೇಳ ತೀರದ್ದು. ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ, ಒನ್ ಇಂಡಿಯಾ ಎಂದು ಬೀಗಿದರೂ ಕೂಡ ಈ ಜನರಿಗೆ ಅದ್ಯಾವುದು ಇಲ್ಲಿ ಅನ್ವಯವಾಗುತ್ತಲೇ ಇಲ್ಲ. ಏಕೆಂದರೆ ಭಾರತದ ಬಹು ದೊಡ್ಡ ನೆಟ್‍ವರ್ಕ್ ಸಂಸ್ಥೆಯಾಗಿರುವ ಬಿಎಸ್‍ಎನ್‍ಎಲ್ ಸೇವೆ ಇಲ್ಲಿ ಈಗಲೂ ಕನಸೇ ಆಗಿದೆ. ಸೂರ್ಲಬ್ಬಿ ನಾಡಿನ ಮುಕ್ಕೋಡ್ಲು, ತಂತಿಪಾಲ, ಹಮ್ಮಿಯಾಲ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ, ಆವಂಡಿ, ಹೊದಕಾನ, ಮೇಘತ್ತಾಳು, ಹಚ್ಚಿನಾಡು, ಮುಂತಾದ ಗ್ರಾಮಗಳ ಜನರು ಸಂವಹನಕ್ಕಾಗಿ ಮೊಬೈಲ್‍ಗಳನ್ನು ಬಳಸದೇ ಇರುವುದು ವಾಸಿ ಎಂಬಂತಾಗಿದೆ. ಏಕೆಂದರೆ ಇಲ್ಲಿ ಬಿಎಸ್‍ಎನ್‍ಎಲ್ ಸೇವೆಯೂ ಸೇರಿದಂತೆ ಉಳಿದ ಯಾವುದೇ ನೆಟ್‍ವರ್ಕ್ ಜಾಲಗಳು ಜನರಿಗೆ ಸಿಗುತ್ತಿಲ್ಲ.

ಈ ಭಾಗದ ಹಲವು ಗ್ರಾಮಗಳ ಜನರು ಈಗಲೂ ತಮ್ಮ ಮನೆಯಂಗಳದ ತಾರಸಿ ಮೇಲೆ, ಮೇಲ್ಛಾವಣಿ ಮೇಲೆ, ಹೆಂಚುಗಳ ಮೇಲೆ, ಮನೆಗಳ ಮುಂದಿನ ಗಿಡ ಮರಗಳ ಮೇಲೆ ತಮ್ಮ ಮೊಬೈಲ್‍ಗಳನ್ನು ತೂಗು ಹಾಕಿ ಒಳಬರುವ ಕರೆಗಳಿಗಾಗಿ ಕಾಯುವಂತಾಗಿದೆ. ಇಲ್ಲಿನ ಮಹಿಳೆಯರು ಹಾಗೂ ಪುರುಷÀರು ತಮ್ಮ ಬಳಿ ಇರುವ ಮೊಬೈಲ್‍ಗಳನ್ನು

(ಮೊದಲ ಪುಟದಿಂದ) ದಾರದ ಸಹಾಯದಲ್ಲಿ ತೂಗು ಹಾಕಿ ಆಕಸ್ಮಿಕವೋ ಎಂಬಂತೆ ರಿಂಗಣಿಸಿ ಬಿಟ್ಟರೆ ಸಾಕು, ತಾವು ಮನೆಯಂಗಳದಲ್ಲಿ ಅಥವಾ ಕೃಷಿ ಭೂಮಿಯಲ್ಲಿ ಎಲ್ಲಿದ್ದರೂ ಸರಿಯೇ ಭಾರೀ ಸಂತಸ ಹಾಗೂ ಸಂಭ್ರಮಗಳಿಂದ ರಿಂಗಣಿಸುವ ಮೊಬೈಲ್‍ಗಳನ್ನು ಕಿವಿಗಳಿಗೆ ಅವುಚಿ ಹಿಡಿದು ಹಲೋ ಹಲೋ ಎಂದುಕೊಂಡು ಮನೆಗಳ ಸುತ್ತಲೂ ಓಡಾಡಿಕೊಂಡು ಮಾತಾಡುವ ಪ್ರಯತ್ನ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ಕೆಲವರು ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ತೂಗು ಹಾಕಿದ ಮೊಬೈಲ್‍ಗಳನ್ನು ಸ್ಪರ್ಶಿಸದೆಯೇ ಒಳಬರುವ ಕರೆಗಳಿಗೆ ಮಾತನಾಡುವ ಪ್ರಯತ್ನ ಮಾಡುತ್ತಾರೆ.

ಕೆಲವೊಮ್ಮೆ ಮೊಬೈಲ್ ರಿಂಗಣಿಸಿದ ಪ್ರಮುಖ ಸಮಾಚಾರಗಳು ಅಪೂರ್ಣಗೊಂಡರೆ ಮತ್ತೆ ಗಾಳಿಯಲ್ಲಿ ತೇಲಿ ಬರುವ ನೆಟ್‍ವರ್ಕ್ ಸಿಗ್ನಲ್‍ಗಳನ್ನು ಶಬರಿಯಂತೆ ಕಾದು ತ್ರಾಸಪಟ್ಟು ಮಾತನಾಡುವುದು ಇದೆ. ಏಕೆಂದರೆ ಪೆÇೀನ್ ರಿಂಗಣಿಸಿದಾಗ ಮೇಘಗಳ ಅಲೆಗಳಲ್ಲಿ ತೇಲಿ ಬರುವ ನೆಟ್‍ವರ್ಕ್ ಸರಿಯಿಲ್ಲದ ಕಾರಣ ಅಸ್ಪಷÀ್ಟ ಧ್ವನಿ ಈ ಜನರಿಗೆ ಬೇಸರ ಮೂಡಿಸಿದೆ.

ಆರು ಕಿಮೀ ಕಾಲ್ನಡಿಗೆ: ಇನ್ನು ಸೂರ್ಲಬ್ಬಿಯಲ್ಲಿನ ಸರ್ಕಾರಿ ಶಾಲೆಗೆ ಬರುವ ಮಕ್ಕಳು ವಾಹನಗಳ ಸೌಕರ್ಯ ಇಲ್ಲದ ಕಾರಣ ಆರು ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಶಾಲೆ ಸೇರಬೇಕಿದೆ. ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವವರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸಲೆಂದೇ ದೂರದ ನಗರ ಪ್ರದೇಶಗಳಲ್ಲಿ ಮನೆಗಳನ್ನು ಮಾಡಿ ಓದಿಸುತ್ತಿದ್ದಾರೆ. ಸರ್ಕಾರಿ ಶಾಲೆ ಎಂದರೆ ಕೇವಲ ಬಡವರು, ನಿರ್ಗತಿಕರು ಹಾಗೂ ಶ್ರಮಿಕರಿಗೆ ಮಾತ್ರ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭ ಪೆÇೀಷÀಕರು ತಮ್ಮ ಮಕ್ಕಳನ್ನು ವಿಧಿಯಿಲ್ಲದೇ ಈ ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಿದ್ದು, ಶಿಕ್ಷಣ ಇಲಾಖೆ ಈ ಮಕ್ಕಳ ಸಂಚಾರ ವ್ಯವಸ್ಥೆ ಕಲ್ಪಿಸಿದರೆ ಒಳ್ಳೆಯದು ಎನ್ನುತ್ತಾರೆ ಇಲ್ಲಿನ ಪೆÇೀಷÀಕ ಮಿನ್ನಂಡ ನೇತ್ರು.

ಗ್ರಾಮ ಪಂಚಾಯತಿಗಳು ದೂರ: ಗುಂಪು ಮನೆಗಳಿಲ್ಲದ ಅಲ್ಲಲ್ಲಿ ಅರ್ಧ ಕಿಮೀಗೊಂದರಂತೆ ಜನವಸತಿ ಇರುವ ಈ ನಾಡಿನ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಗ್ರಾಮ ಪಂಚಾಯಿತಿ ಕಾರ್ಯಾಲಯಗಳು ಕೂಡ ಈ ಜನರಿಗೆ ಎಡತಾಕುತ್ತಿಲ್ಲ. ಏಕೆಂದರೆ ಐದಾರು ಕಿಮೀಗಳಿಗಿಂತಲೂ ಅಂತರದ ಪಂಚಾಯಿತಿ ಕಚೇರಿಗಳಿಗೆ ಇಲ್ಲಿನ ಅದೆಷÉ್ಟೂೀ ಜನ ಕಾಲ್ನಡಿಗೆಯಲ್ಲೇ ನಡೆದು ಸಾಗುತ್ತಾರೆ.

ಇಲ್ಲಿನ ಅಮಾಯಕ ಜನರ ಮನೆ ಬಾಗಿಲಿಗೆ ಆಡಳಿತ ಹಾಗೂ ಸರ್ಕಾರದ ಹಕ್ಕುಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಬೇಕಿದೆ. ಇಲ್ಲಿನ ಮಕ್ಕಳು ಹಾಗೂ ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟು ಕನಿಷ್ಟ ದಿನದ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಅವಧಿ ಸಾರಿಗೆ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಮುಂದಾಗಬೇಕೆಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಳೆಗಾಲದಲ್ಲಿ ಅತ್ಯಂತ ಹೆಚ್ಚು ಮಳೆ ಸುರಿಯುವ ಕಾರಣ ಬೆಳೆಗಳು ನೆಲಕಚ್ಚುತ್ತಿದ್ದು ಆರ್ಥಿಕ ಸಂಕಷÀ್ಟವನ್ನು ಈ ಜನ ಅನುಭವಿಸುತ್ತಿದ್ದಾರೆ.

-ಮೂರ್ತಿ