ಮಡಿಕೇರಿ, ಮೇ 11: ಲಯನ್ಸ್ ಕ್ಲಬ್ ಮಡಿಕೇರಿಯ ಅಧ್ಯಕ್ಷ ಮೋಹನ್ ಅವರು ವೈಯಕ್ತಿಕವಾಗಿ 125 ಮಂದಿ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಅಹಾರ ಕಿಟ್‍ಗಳನ್ನು ವಿತರಿಸಿದ್ದಾರೆ. ತಿತಿಮತಿ ತೋಟ ಕಾರ್ಮಿಕರು, ತಿತಿಮತಿ ಪ.ಪೂ. ಕಾಲೇಜಿನ ಸಭಾಂಗಣದ ಹತ್ತಿರ, ಮಡಿಕೇರಿ ಶೇಖರ್ ಕಾಂಪ್ಲೆಕ್ಸ್ಸ್‍ನಲ್ಲಿಯೂ 26 ಕಿಟ್ಟುಗಳನ್ನು ಉಚಿತವಾಗಿ ನೀಡಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಧುಕರ್ ಜೊತೆಗಿದ್ದರು.