ಶನಿವಾರಸಂತೆ, ಮೇ 9: ಶನಿವಾರಸಂತೆ ವಲಯ ಅರಣ್ಯ ಇಲಾಖೆ ವತಿಯಿಂದ ಕಟ್ಟೇಪುರ ಸಸ್ಯ ಕ್ಷೇತ್ರದಲ್ಲಿ 2020-21ನೇ ಸಾಲಿನ ಮಳೆಗಾಲದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಲು ವಿವಿಧ ಸಸಿಗಳನ್ನು ಬೆಳೆಯಲಾಗಿದೆ.
ಸಿಲ್ವರ್, ಮಹಾಗನಿ, ಬಿದಿರು, ಶ್ರೀಗಂಧ, ಬೀಟೆ, ಬಳಂಜಿ, ತೇಗ, ಕೂಳಿ ಸಸಿಗಳನ್ನು ಬೆಳೆಯಲಾಗಿದ್ದು, ಮೇ 11 ರಿಂದ ಮಾರಾಟ ಆರಂಭವಾಗುತ್ತದೆ. ಪ್ಲಾಸ್ಟಿಕ್ ಚೀಲದಲ್ಲಿರುವ ಚಿಕ್ಕ ಸಸಿ ಒಂದಕ್ಕೆ ರೂ. 1 ರಂತೆ ದೊಡ್ಡ ಸಸಿ ರೂ. 3 ರಂತೆ ಸರಕಾರದ ನಿಗದಿತ ದರದಲ್ಲಿ ಮಾರಾಟ ಮಾಡಲಾಗುವುದು.
ಸಸಿಗಳನ್ನು ಖರೀದಿಸಲು ಇಚ್ಛಿಸುವ ರೈತರು, ಸಾರ್ವಜನಿಕರು ಆರ್.ಟಿ.ಸಿ. ಹಾಗೂ ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಖರೀದಿಸಬೇಕು ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ. ಕೊಟ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.