ಕುಶಾಲನಗರ, ಮೇ 9: ಕುಶಾಲನಗರದ ನಿರ್ಗತಿಕ ಕುಟುಂಬಗಳಿಗೆ ಎಸ್ವೈಎಸ್ ಕುಶಾಲನಗರ ಶಾಖೆ ವತಿಯಿಂದ ರಂಜಾನ್ ಕಿಟ್ ವಿತರಣೆ ಮಾಡಲಾಯಿತು. ನೂರ್ ಮದೀನದ ಅಧ್ಯಾಪಕ ಹಾಫಿಳ್ ಶೌಖಲಿ ಖಾಫಿ ದುವಾ ನಿರ್ವಹಿಸಿದರು. ಹಸ್ಸನ್ ಫೈಜಿ ಮತ್ತು ಹುಸೈನ್, ಕಿಟ್ ವಿತರಣೆ ಮಾಡಿದರು. ಶಾಖೆ ಅಧ್ಯಕ್ಷ ಹಂಝ ಮಾನಿ ಕುಂಜಿಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ವೈಎಸ್ ಶಾಖೆ ಕಾರ್ಯದರ್ಶಿ ಅಬ್ದುಲ್ ರಶೀದ್ ಹಳ್ರಮಿ, ಸಂಘಟನೆಯ ಕಾರ್ಯದರ್ಶಿ ಹಾಗೂ ನೂರ್ ಮದೀನದ ಲೆಕ್ಕಾಧಿಕಾರಿ ಸಿದ್ಧಿಖ್, ನೂರ್ ಮದೀನ ಅಧ್ಯಕ್ಷ ಸೂಫಿ, ಉಪಾಧ್ಯಕ್ಷ ಹುಸೈನ್, ಸದಸ್ಯ ಅಬ್ದುಲ್ ಜಬ್ಬಾರ್ ಮತ್ತಿತರರು ಇದ್ದರು.