ಸಿದ್ದಾಪುರ, ಮೇ 10: ಕಳೆದ ಒಂದು ವಾರದಲ್ಲಿ 7 ನಾಗರ ಹಾವುಗಳನ್ನು ಸೆರೆ ಹಿಡಿಯುವಲ್ಲಿ ಉರಗ ಪ್ರೇಮಿ ಸುರೇಶ್ ಯಶಸ್ವಿ ಯಾಗಿದ್ದಾರೆ. ಒಂದು ವಾರಗಳಿಂದ ಅಮ್ಮತ್ತಿ ಸಮೀಪದ ಹೊಸೂರು ಗ್ರಾಮದ ಮೋಹನ್ ಎಂಬವರ ತೋಟದ ಲೈನ್ ಮನೆಯಲ್ಲಿದ್ದ ನಾಗರಹಾವು, ಗುಹ್ಯ ಗ್ರಾಮದಲ್ಲಿ ಮತ್ತು ನೆಲ್ಲಿಹುದಿಕೇರಿ ಗ್ರಾಮದ ಕೃಷ್ಣಪ್ಪ ಎಂಬವರ ಮನೆಯ ಕೋಣೆಯಲ್ಲಿ ಪಾತ್ರೆಯ ಒಳಗೆ ಇದ್ದ ನಾಗರಹಾವನ್ನು ಸೆರೆ ಹಿಡಿದಿದ್ದಾರೆ.