ಗುಡ್ಡೆಹೊಸೂರು, ಮೇ 10: ಇಲ್ಲಿನ ತೆಪ್ಪದಕಂಡಿ ಎಂಬ ಸ್ಥಳದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಮೂಲಕ ಪ್ರತಿನಿತ್ಯ ನೂರಾರು ಮಂದಿ ಮೈಸೂರು ಜಿಲ್ಲೆಯಿಂದ ಮತ್ತು ಕೊಡಗು ಜಿಲ್ಲೆಯಿಂದ ಎರಡು ಕಡೆಗೂ ಸಂಚರಿಸುತ್ತಿದ್ದರು. ಆದರೆ ಲಾಕ್‍ಡೌನ್ ಆದ ಕಾರಣ ಮೊದಲಿಗೆ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಬೈಲ್‍ಕೊಪ್ಪ ಪೊಲೀಸರು ಒಂದು ಭಾಗಕ್ಕೆ ಬೀಗ ಜಡಿದಿದ್ದರು. ಅಲ್ಲದೆ ಎರಡು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ತೂಗು ಗುಡ್ಡೆಹೊಸೂರು, ಮೇ 10: ಇಲ್ಲಿನ ತೆಪ್ಪದಕಂಡಿ ಎಂಬ ಸ್ಥಳದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಮೂಲಕ ಪ್ರತಿನಿತ್ಯ ನೂರಾರು ಮಂದಿ ಮೈಸೂರು ಜಿಲ್ಲೆಯಿಂದ ಮತ್ತು ಕೊಡಗು ಜಿಲ್ಲೆಯಿಂದ ಎರಡು ಕಡೆಗೂ ಸಂಚರಿಸುತ್ತಿದ್ದರು. ಆದರೆ ಲಾಕ್‍ಡೌನ್ ಆದ ಕಾರಣ ಮೊದಲಿಗೆ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಬೈಲ್‍ಕೊಪ್ಪ ಪೊಲೀಸರು ಒಂದು ಭಾಗಕ್ಕೆ ಬೀಗ ಜಡಿದಿದ್ದರು. ಅಲ್ಲದೆ ಎರಡು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ತೂಗು (ಮೊದಲ ಪುಟದಿಂದ) ಅಲ್ಲದೆ ಪಾಸ್ ನೀಡುತ್ತಿದ್ದರೂ ಕೂಡ ಮೈಸೂರು ಕಡೆಯಿಂದ ಈ ಭಾಗಕ್ಕೆ ಹಗಲು ರಾತ್ರಿ ಎನ್ನದೆ ಜನರು ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಅಲ್ಲದೆ ತೂಗು ಸೇತುವೆ ವ್ಯಾಪ್ತಿಯಲ್ಲಿ ಗಾಂಜಾ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಸೇತುವೆ ಮೂಲಕ ಅನಾವಶ್ಯಕವಾಗಿ ತಿರುಗಾಡುವವರಿಗೆ ಕಡಿವಾಣ ಹಾಕಬೇಕಾಗಿದೆ. ಕಣಿವೆ ತೂಗು ಸೇತುವೆ ಕೂಡಿಗೆ : ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಬಂದ್ ಮಾಡಲಾಗಿದೆ. ಕಣಿವೆಯ ರಾಮಲಿಂಗೇಶ್ವರ ದೇವಾಲಯದ ಹತ್ತಿರ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಮೂಲಕ ಮೈಸೂರು ಜಿಲ್ಲೆಯ ಜನರು ಯಾವುದೇ ಅಡೆತಡೆಗಳು ಇಲ್ಲದೆ ಸೇತುವೆಯನ್ನು ದಾಟಿ ಕೊಡಗು ಜಿಲ್ಲೆಯನ್ನು ಪ್ರವೇಶಿಸುತ್ತಿರುವುದು ಸಾಮಾನ್ಯವಾಗಿದೆ.

ಲಾಕ್‍ಡೌನ್ ಸಡಿಲಿಕೆಯಿಂದ ಮೈಸೂರು ಬೆಂಗಳೂರು ಕಡೆಯ ಜನರು ಕೊಡಗಿಗೆ ಬರಲು ಇದು ಅತಿ ಸುಲಭದ ದಾರಿಯಾಗಿದೆ. 45 ದಿನಗಳಿಂದ ಬೆಂಗಳೂರು ಮೈಸೂರು ನಗರಗಳಲ್ಲಿದ್ದು, ಬೇಸರವಾಗಿ ಕೊಡಗಿನತ್ತ ಬರಲು ಪ್ರಾರಂಭ ಮಾಡಿದ್ದಾರೆ. ಕುಶಾಲನಗರದ ಕೂಪ್ಪ ಗೇಟ್‍ನ ಮೂಲಕ ಮಾತ್ರವೇ ಸಂಚಾರಿಸಲು ಕೊಡಗಿಗೆ ನಿಯಮಬದ್ಧ ಅನುಮತಿ ನೀಡಲಾಗಿದೆ.

ಅದರೆ ಅನುಮತಿಗಾಗಿ ಪರದಾಡುವ ಬದಲು ಅಡ್ಡ ದಾರಿಗಾಗಿ ಪಿರಿಯಾಪಟ್ಟಣ ಮೂಲಕ ಬಂದು ಕಣಿವೆಯ ತೂಗುಸೇತುವೆ ಹತ್ತಿರ ಜನರನ್ನು ವಾಹನದಲ್ಲಿ ಇಳಿಸಿ ನಂತರ ಹೋಗುತ್ತಿದ್ದಾರೆ.

ಕಣಿವೆಯ ತೂಗು ಸೇತುವೆ ಹತ್ತಿರ ವಾಹನಗಳ ಸಂಚಾರವಿಲ್ಲ. ಅದರೆ ಜನರು ಮಾತ್ರ ತಮ್ಮ ಸಾಮಗ್ರಿಗಳೊಂದಿಗೆ ಕೊಡಗು ಜಿಲ್ಲೆಯನ್ನು ಪ್ರವೇಶಿಸಿ ನಂತರ ಬೇರೆಡೆಗೆ ಹೋಗಲು ಇಲ್ಲಿನ ವಾಹನಗಳ ಮೂಲಕ ಹೋಗುವ ದೃಶ್ಯ ಕಾಣಬಹುದಾಗಿದೆ.

ಕೊಡಗು ಜಿಲ್ಲೆ ಹಸಿರು ವಲಯಾಕ್ಕೆ ಸೇರಿರುವುದರಿಂz ಬೇರೆ ಜಿಲ್ಲೆಯವರು ಯಾವುದೆ ತಪಾಸಣೆ ಇಲ್ಲದೆ ಈ ರೀತಿಯಲ್ಲಿ ಬಂದರೆ ಗತಿ ಏನೋ ಎಂಬುದು ಜನವಲಯದಲ್ಲಿ ಆತಂಕವಾಗಿದೆ.

- ಗಣೇಶ್ ಕುಡೆಕಲ್, ನಾಗರಾಜ ಶೆಟ್ಟಿ