ಗೋಣಿಕೊಪ್ಪ ವರದಿ, ಮೇ 10 : ಪಿರಿಯಾಪಟ್ಟಣ - ಪೆÇನ್ನಂಪೇಟೆ ವಿದ್ಯುತ್ ಮಾರ್ಗದ 66 ಕೆ.ವಿ. ತಂತಿಯ ಮೇಲೆ ನೊಕ್ಯ ಗ್ರಾಮದಲ್ಲಿ ಭಾರೀ ಗಾತ್ರದ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ವೀರಾಜಪೇಟೆ ತಾಲೂಕಿನಾದ್ಯಂತ ಹಾಗೂ ಮೂರ್ನಾಡು, ನಾಪೋಕ್ಲು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು.
ಶಂಭು ಎಂಬವರ ತೋಟದಲ್ಲಿ ಗಾಳಿಗೆ ಶನಿವಾರ ರಾತ್ರಿ 7.30 ಗಂಟೆ ಸುಮಾರಿಗೆ ಮರ ಬಿದ್ದು ವಿದ್ಯುತ್ ಸ್ಥಗಿತಗೊಂಡಿತು. ಪರಿಣಾಮ ವೀರಾಜಪೇಟೆ ತಾಲೂಕು ಸೇರಿದಂತೆ ಮೂರ್ನಾಡು ವ್ಯಾಪ್ತಿಯಲ್ಲಿ 20 ಗಂಟೆಗೂ ಅಧಿಕ ಕಾಲ ವಿದ್ಯುತ್ ಇರಲಿಲ್ಲ. ಗೋಣಿಕೊಪ್ಪ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಅಂಕಯ್ಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮಕೈಗೊಂಡರು.