ಕಡಂಗ, ಮೇ 10: ಕಳೆದ 2 ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊದ್ದಮಾನಿ ನಿವಾಸಿ ಅಂಬಾಡಿರ ರಾಮಯ್ಯ ಅವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಅದೇ ರೀತಿ ಹಲವಾರು ಮನೆಗಳಿಗೆ ಹಾನಿ ಉಂಟಾಗಿ ನಷ್ಟದ ಜೊತೆಗೆ ಸಂಕಷ್ಟ ಎದುರಾಗಿದೆ. ಬೃಹತ್ ಗಾತ್ರದ ಮರಗಳು ಬಿದ್ದು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಕಾಕೋಟುಪರಂಬು ಗ್ರಾ.ಪಂ. ವ್ಯಾಪ್ತಿಯ ಕಡಂಗಮುರೂರು ಗ್ರಾಮದ ಅಬ್ದುಲ್ಲ ಅವರ ಮನೆಯ ಶೀಟುಗಳು ಹಾನಿಯಾಗಿದೆ.

ಅದೇ ರೀತಿ ಕಾಕೋಟು ಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಸಲು ಬಂದ ಬಾಳೆ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಇದರಿಂದ ಶಕೀರ್ ಎಂಬ ಕೃಷಿಕ ಕಂಗಾಲಾಗಿದ್ದಾರೆ.