ಕೂಡಿಗೆ, ಮೇ 9: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ರಾತ್ರಿ ಕಾಡಾನೆ ದಾಳಿಯಿಂದಾಗಿ ಮೂರು ಎಕರೆ ಪ್ರದೇಶದಲ್ಲಿ ಬೆಳೆಸಲಾಗಿದ್ದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ತುಳಿದು, ತಿಂದು ನಷ್ಟಪಡಿಸಿವೆ. ಹುದುಗೂರು ಗ್ರಾಮದ ಕಾಚಾನ ಎಂಬವರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಕಾಡಾನೆ ತುಳಿತಕ್ಕೆ ಒಳಗಾಗಿ ಬಾರಿ ನಷ್ಟವಾಗಿದೆ. ಬೆಂಡೆಬೆಟ್ಟದ ಮೀಸಲು ಅರಣ್ಯದಿಂದ ನೀರಿಗಾಗಿ ಹಾರಂಗಿ ನದಿ ಭಾಗಕ್ಕೆ ಬರುವ ಕಾಡಾನೆಗಳು ಬೆಳೆ ಹಾನಿ ಮಾಡಿ ಭಾರೀ ನಷ್ಟಪಡಿಸಿವೆ. ಸಂಬಂಧಿಸಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.