ಗೋಣಿಕೊಪ್ಪಲು, ಮೇ 10 : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇರೆ ಪೊನ್ನಂಪೇಟೆ ಪೊಲೀಸರು ದಾಳಿ ನಡೆಸಿ ಮರಳು ತುಂಬಿದ ಟ್ರ್ಯಾಕ್ಟರ್ನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಮುಂಜಾನೆ ವೇಳೆ ನಿಟ್ಟೂರು ಗ್ರಾಮದ ನಿವಾಸಿ ಟ್ರ್ಯಾಕ್ಟರ್ ಚಾಲಕ ತಮ್ಮಯ್ಯ ಎಂಬಾತ ಅಕ್ರಮವಾಗಿ (ಕೆ.ಎ.12.ಟಿ.2101) ಟ್ರ್ಯಾಕ್ಟರ್ನಲ್ಲಿ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಡಿ. ಕುಮಾರ್ ಟ್ರ್ಯಾಕ್ಟರ್ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದು, ತಮ್ಮಯ್ಯ ಪರಾರಿಯಾಗಿದ್ದಾನೆ. ಕಾರ್ಯಾಚರಣೆಯಲ್ಲಿ ಎ.ಎಸ್.ಐ. ವೆಂಕಟೇಶ್, ಸಿಬ್ಬಂದಿಗಳಾದ ಸತೀಶ್, ಜೀವನ್, ಚಾಲಕ ರಾದೇಶ್ ಪಾಲ್ಗೊಂಡಿದ್ದರು,