ಮಡಿಕೇರಿ, ಮೇ 10: ಕುಶಾಲನಗರ-ಕೊಪ್ಪ ಗೇಟ್‍ನಿಂದ ಇಂದು ಬಂದ 308 ಮಂದಿ ಸೇರಿ ಇದುವರೆಗೆ ಒಟ್ಟು 4,408 ಮಂದಿ ಅಂತರ ಜಿಲ್ಲೆಯವರು ಜಿಲ್ಲೆಗೆ ಆಗಮಿಸಿದ್ದಾರೆ. ಇಂದು ಬೇರೆ ರಾಜ್ಯದಿಂದ 40 ಮಂದಿ ಬಂದಿದ್ದು, ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಆ ಮೂಲಕ 164 ಮಂದಿ ಹೊರ ರಾಜ್ಯದಿಂದ ಜಿಲ್ಲೆಗೆ ಬಂದಿದ್ದಾರೆ. ಸಂಪಾಜೆ ಗೇಟ್ ಮೂಲಕ ಇಂದು ಬಂದ 73 ಮಂದಿ ಸೇರಿ ಇದುವರೆಗೆ 569 ಮಂದಿ ಅಂತರ ಜಿಲ್ಲೆಯಿಂದ ಆಗಮಿಸಿದ್ದಾರೆ. ಹೊರ ರಾಜ್ಯದಿಂದ ಬಂದ 9 ಮಂದಿ ಸೇರಿ ಇದುವರೆಗೆ 58 ಮಂದಿ ಆಗಮಿಸಿದ್ದಾರೆ.