ಮಡಿಕೇರಿ, ಮೇ. 8: ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡಂಡ ಎಂ. ಕುಟ್ಟಪ್ಪ ಅವರು ವಿಧಿವಶರಾಗಿರುವ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ಸಂತಾಪದೊಂದಿಗೆ ಹಾಕಿ ಉತ್ಸವದ ಕುರಿತಾಗಿ ತಮ್ಮ ಅನುಭವವನ್ನು ಮೆಲುಕು ಹಾಕಿ ‘ಟ್ವೀಟ್’ ಮಾಡಿದ್ದಾರೆ.

ಹಾಕಿ ಉತ್ಸವ ಆರಂಭಗೊಂಡ ಸಂದರ್ಭ 1997 ರಲ್ಲಿ ಭಾಸ್ಕರ್‍ರಾವ್ ಅವರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಕರಡದಲ್ಲಿ ಆರಂಭಗೊಂಡ ಪಾಂಡಂಡ ಕಪ್ ಆರಂಭಿಕ ವರ್ಷದ ಹಾಕಿ ಪಂದ್ಯಾವಳಿ ಉದ್ಘಾಟನೆ ಮಾಡಿದ ನೆನಪು ವ್ಯಕ್ತಪಡಿಸಿರುವ ಅವರು ಈ ಉತ್ಸವದ ಮೂಲಕ ಚದುರಿದಂತಿದ್ದ ಕೊಡವ ಕುಟುಂಬಗಳು ಒಂದಾಗಿವೆ. ಜನಾಂಗದವರು ಹಾಕಿ ಕ್ರೀಡೆಯನ್ನು ಪ್ರೀತಿಸುವಂತವರಾಗಿದ್ದು, ಈ ಮೂಲಕ ಇದು ಮತ್ತಷ್ಟು ಯಶಸ್ಸು ಕಂಡಿದೆ. ಇದು ಮುಂದುವರಿಯಲಿ ಎಂದು ಅವರು ಆಶಿಸಿದ್ದಾರೆ.