ಮಡಿಕೇರಿ, ಮೇ 8: ಕೊಡಗು ಜಿಲ್ಲೆಯ ಕೊರೊನಾ ವಾರಿಯರ್ಸ್‍ಗಳಿಗೆ ವೀರಾಜಪೇಟೆಯ ಅನುರಾಧಾ ಫೌಂಡೇಷನ್ ಸಹಯೋಗದೊಂದಿಗೆ ಸೇವಾ ಭಾರತಿ, ಕೊಡಗು ಸಂಸ್ಥೆಯ ಸ್ವಯಂಸೇವಕರು ತಯಾರಿಸಿದ ಫೇಸ್ ಶೀಲ್ಡ್ ಮಾಸ್ಕ್‍ಗಳನ್ನು ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಜಿಲ್ಲೆಯ ವೈದ್ಯರು, ದಾದಿಯರು ಮತ್ತು ಆರಕ್ಷಕರಿಗೆ ಅವಶ್ಯಕತೆ ಇರುವಂತಹ ಫೇಸ್ ಶೀಲ್ಡ್ ಮಾಸ್ಕ್‍ಗಳನ್ನು ಕುಶಾಲನಗರದ ಸೇವಾ ಭಾರತಿ ಸ್ವಯಂಸೇವಕರು ಸಮಾಜ ಸೇವಕಿ ಸಲೀಲ ಪಾಟ್ಕರ್ ಅವರ ಮಾರ್ಗದರ್ಶನದಲ್ಲಿ ಸುಮಾರು 5000 ಮಾಸ್ಕ್‍ಗಳನ್ನು ತಯಾರಿಸಿದ್ದರು. ಇಂದು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭ ಅನುರಾಧಾ ಫೌಂಡೇಷನ್‍ನ ಟ್ರಸ್ಟಿ ಬಿನೂ ಜಾರ್ಜ್, ಸಮಾಜ ಸೇವಕಿ ಸಲೀಲ ಪಾಟ್ಕರ್, ಸೇವಾ ಭಾರತಿ ಉಪಾಧ್ಯಕ್ಷ ಕೆ.ಕೆ. ಮಹೇಶ್ ಕುಮಾರ್, ಖಜಾಂಚಿ ಡಿ.ಹೆಚ್. ತಮ್ಮಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕೆ.ಕೆ. ದಿನೇಶ್ ಕುಮಾರ್, ಜಿಲ್ಲಾ ಪ್ರಚಾರಕ್ ಶ್ರೀನಿಧಿ, ಸ್ವಯಂಸೇವಕ ಲಕ್ಷಿ ್ಮನಾರಾಯಣ ಹಾಗೂ ಇತರರು ಇದ್ದರು.