ಕಡಂಗ, ಮೇ 8: ಮಡಿಕೇರಿ ತಾಲೂಕಿನ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ.
ಸುಮಾರು ಒಂದು ತಿಂಗಳ ಒಳಗೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಪಟ್ಟು, ಚೆಯ್ಯಂಡಾಣೆ, ಎಡಪಾಲ, ಕರಡ ವ್ಯಾಪ್ತಿಯಲ್ಲಿ ನಿರಂತರ ಆನೆ ಹಾವಳಿಯಿಂದ ಕಾಫಿ ಬೆಳೆಗಾರರು ಮತ್ತು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅರಪಟ್ಟು ಗ್ರಾಮದ ನೆರಪಂಡ ಅಸ್ತು ತಮ್ಮಯ್ಯನವರ ಕಾಫಿ ತೋಟದಲ್ಲಿ ಆನೆ ದಾಳಿಯಿಂದ ಕಾಫಿ ಹಾಗೂ ಬಾಳೆ ಗಿಡಗಳು ಸಂಪೂರ್ಣನಾಶವಾಗಿವೆ.
ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಅದೇ ರೀತಿ ಈ ಭಾಗದ ರೈತರಿಗೆ ಉಂಟಾದ ನಷ್ಟದ ಪರಿಹಾರವನ್ನು ಅಧಿಕಾರಿಗಳು ಕೂಡಲೇ ನೀಡಬೇಕು ಎಂದು ಗ್ರಾಮದ ಪೊನ್ನಣ್ಣ ಆಗ್ರಹಿಸಿದ್ದಾರೆ. - ನೌಫಲ್, ಕಡಂಗ