ಗೋಣಿಕೊಪ್ಪಲು, ಮೇ 8: ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದ ಜೂಜು ಅಡ್ಡೆಗೆ ದಾಳಿ ನಡೆಸಿದ ಕುಟ್ಟ ಪೆÇಲೀಸರು ಹಣ, ವಾಹನ ಸಹಿತ ಆರೋಪಿಗಳನ್ನು ಬಂಧಿದ್ದಾರೆ.

ಮಧ್ಯರಾತ್ರಿಯಲ್ಲಿ ಜೂಜು ಆಡುತ್ತಿದ್ದ ಕುಟ್ಟ ಪೆÇಲೀಸ್ ಠಾಣಾ ಸರಹದ್ದಿನ ಕೋತೂರು ಗ್ರಾಮದ ದಿನೇಶ್ ಎಂಬವರ ಮನೆ ಅಂಗಳದಲ್ಲಿ ಪ್ರಭಾವಿಗಳ ದೊಡ್ಡ ಮಟ್ಟದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆ ಕುಟ್ಟ ವೃತ್ತ ನಿರೀಕ್ಷಕ ಎಸ್. ಪರಶಿವಮೂರ್ತಿ, ಕುಟ್ಟ ಪಿಎಸ್‍ಐ ಚಂದ್ರಪ್ಪ ಹಾಗೂ ಸಿಬ್ಬಂದಿಗಳು ದಾಳಿ ಮಾಡಿದ ಸಂದರ್ಭ, ಜೂಜಾಟ ಆಡುತ್ತಿದ್ದ ಕೋತೂರುವಿನ ವಿ.ಎಂ. ದಿನೇಶ್ , ಎಂ.ಎಸ್. ಪ್ರದೀಪ್, ಎಂ.ಎನ್. ರವಿ, ಪೆÇನ್ನಂಪೇಟೆಯ ಹೆಚ್.ಕೆ. ಆಶಿತಾ, ಬಲ್ಯಮುಂಡೂರು ವಿನ, ಎಂ.ಬಿ. ಬಾಲಕೃಷ್ಣ ಎಂಬವರನ್ನು ದಸ್ತಗಿರಿ ಮಾಡಿ ನಗದು ಹಣ ರೂ.39.630, ಎರಡು ಕಾರು, ಮಾರುತಿ ಓಮ್ನಿ, ಒಂದು ಮೋಟಾರ್ ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕುಟ್ಟ ಸರ್ಕಲ್ ಇನ್ಸ್‍ಪೆಕ್ಟರ್ ಪರಶಿವಮೂರ್ತಿ ತಿಳಿಸಿದ್ದಾರೆ. ಕುಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆÇಲೀಸ್ ಅಧೀಕ್ಷಕಿ ಡಾ .ಸುಮನ್ ಡಿ.ಪಿ. ಹಾಗೂ ವೀರಾಜಪೇಟೆ ಉಪ ವಿಭಾಗದ ಪೆÇಲೀಸ್ ಉಪ ಅಧೀಕ್ಷಕ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಜೇಶ್, ರಂಜೀತ್, ಹರೀಶ್, ಹನುಮಂತ ರಾಜು, ಪ್ರಭಾಕರ, ಹನುಮಂತ ಸಾಬು ತಳವಾರ್, ಮನೋರಂಜನ್, ಚಾಲಕರಾದ ವಿನಾಯಕ ಹಿರೇಮಠ, ಮೋಹನ್ ಭಾಗವಹಿಸಿದ್ದರು.