ಸಿದ್ದಾಪುರ, ಮೇ 7: ಹಣದ ವಿಚಾರದಲ್ಲಿ ಕಾರ್ಮಿಕರಿಬ್ಬರ ನಡುವೆ ಕಲಹ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿದ್ದಾಪುರ ಸಮೀಪ ಗುಹ್ಯದಲ್ಲಿ ಸಂಭವಿಸಿದೆ. ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಲಾಲಾ ಎಂಬವರಿಗೆ ಸೇರಿದ ಗದ್ದೆಯಲ್ಲಿ ಶುಂಠಿ ಕೆಲಸಕ್ಕೆ ಬಂದ ಕಾರ್ಮಿಕ ಚಂದ್ರ ಎಂಬಾತನೇ ಸಾವಿಗೀಡಾದ ವ್ಯಕ್ತಿ. ಹುಂಡಿ ನಿವಾಸಿ ಮಹಮ್ಮದ್ ಎಂಬವರು ಶುಂಠಿ ಕೃಷಿ ಮಾಡಲೆಂದು ಗುಹ್ಯ ಗ್ರಾಮದ ಲಾಲಾ ಎಂಬವರ ಗದ್ದೆಯನ್ನು ಗುತ್ತಿಗೆಗೆ ಪಡೆದುಕೊಂಡಿದ್ದರು. ಈ ಜಾಗದಲ್ಲಿ ಶುಂಠಿ ಕೃಷಿ ಮಾಡಲು ಕೇರಳ ರಾಜ್ಯದ ಕಾಟಿಕೊಳ ಎಂಬಲ್ಲಿಯ ನಿವಾಸಿಗಳಾದ ಚಂದ್ರ ಹಾಗೂ ರವಿ ಇಬ್ಬರನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದರು. ಇವರಿಬ್ಬರು ಲಾಲಾ ಎಂಬವರ ತೋಟದ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ನಿನ್ನೆ ಹಣದ ವಿಚಾರದಲ್ಲಿ ಇವರಿಬ್ಬರಿಗೆ ಕಲಹ ನಡೆದಿದೆ. ಕಲಹ ತಾರಕಕ್ಕೇರಿ ರವಿ ಎಂಬಾತ ಚಂದ್ರ ಎಂಬಾತನಿಗೆ ಕತ್ತಿಯಿಂದ ಕುತ್ತಿಗೆಯ ಭಾಗಕ್ಕೆ ಬಲವಾಗಿ ಕಡಿದು ಕೊಲೆ ಮಾಡಿರುತ್ತಾನೆ. ತಿಳಿಯದ ರೀತಿಯಲ್ಲಿ ಲೈನ್ (ಮೊದಲ ಪುಟದಿಂದ) ಮನೆಯಲ್ಲಿ ನೀರು ಹಾಕಿ ತೊಳೆದಿದ್ದಾನೆ. ನಂತರ ಚಂದ್ರನ ಮೃತದೇಹವನ್ನು ಮನೆಯಿಂದ ತೆಗೆದುಕೊಂಡು ಹೋಗಿ ಸಮೀಪದ ಹಳ್ಳಕ್ಕೆ ಹಾಕಿ ಏನೂ ತಿಳಿಯದ ರೀತಿಯಲ್ಲಿ ಸಮೀಪದ ಮತ್ತೊಬ್ಬ ಕಾರ್ಮಿಕರ ಮನೆಗೆ ತೆರಳಿದ್ದಾನೆ. ಶುಂಠಿ ಕೃಷಿ ಮಾಡಲು ಗುತ್ತಿಗೆ ಪಡೆದುಕೊಂಡ ಮಹಮದ್ ಇಂದು ಬೆಳಿಗ್ಗೆ ಕೃಷಿ ಮಾಡಿದ ಸ್ಥಳಕ್ಕೆ ಭೇಟಿ ನೀಡಿದಾಗ ಕಾರ್ಮಿಕರಾದ ಚಂದ್ರ ಹಾಗೂ ರವಿ ಕಾಣೆಯಾಗಿದ್ದರು. ತೋಟದ ಮನೆಯಲ್ಲಿ ಹುಡುಕಾಡಿದಾಗ ಕಾಣಸಿಗಲಿಲ್ಲ. ಪರಿಶೀಲಿಸಿದಾಗ ದಾರಿಯುದ್ದಕ್ಕೂ ರಕ್ತದ ಕಲೆಗಳು ಕಂಡುಬಂದಿದೆ. ಹೋಗಿ ನೋಡಿದ ಸಂದರ್ಭ ಚಂದ್ರನ ಮೃತದೇಹ ಸಮೀಪದ ಹಳ್ಳದಲ್ಲಿ ಪತ್ತೆ ಆಗಿದೆ. ಕೊಲೆ ಮಾಡಿದ ಆರೋಪಿ ರವಿಯು ಸಮೀಪದ ಕಾರ್ಮಿಕ ನೋರ್ವ ಮನೆಯಲ್ಲಿ ಇರುವುದಾಗಿ ತಿಳಿದುಬಂದಿದೆ. ಮಹಮದ್ ಸಿದ್ದಾಪುರ ಪೆÇಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಆರೋಪಿ ರವಿಯನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ , ಠಾಣಾಧಿಕಾರಿ ಮೋಹನ್ ರಾಜ್ ಸಿಬ್ಬಂದಿಗಳಾದ ಮಲ್ಲಪ್ಪ, ವಸಂತಕುಮಾರ್ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.