ನಾಪೆÇೀಕ್ಲು, ಮೇ. 7: ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಳ, ಕಕ್ಕುಂದಕಾಡು ಪೈಸಾರಿ ಮತ್ತು ಕಲ್ಲುಮೊಟ್ಟೆಗೆ ತೆರಳುವ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನ ಸಂಚಾರವೇ ದುಸ್ತರ ವಾಗಿದೆ. ಮಳೆಗಾಲದಲ್ಲಿ ಇದರಲ್ಲಿ ನಡೆದಾಡಲು ಕೂಡ ಸಾಧ್ಯವಿಲ್ಲ. ಆದುದರಿಂದ ಮಳೆಗಾಲ ಕ್ಕೂ ಮುನ್ನ ಜಿಲ್ಲಾಡಳಿತ ಈ ರಸ್ತೆ ದುರಸ್ತಿ ಪಡಿಸಿಕೊಡಬೇಕೆಂದು ಗ್ರಾಮದ ಪುಷ್ಪಾ ದೇವಪ್ಪ, ಎಂ.ಕೆ.ತಂಗ, ಬಿ.ಎಸ್.ಸುಧೀರ್, ಎಂ.ಕೆ.ಮಾತ್ಯು, ಎಂ.ಕೆ.ಕುಟ್ಟಪ್ಪ, ಜಾನ್ಸನ್ ಹರಿದಾಸ, ಅಶ್ವತ್, ಮಣಿ, ಟಿ.ಎ.ಆನಂದ ಸ್ವಾಮಿ ಮತ್ತಿತರರು ಆಗ್ರಹಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ಯ ಮೂಲಕ ಹೇಳಿಕೆ ನೀಡಿದ ಅವರು ನಾಪೆÇೀಕ್ಲು - ಅಜ್ಜಿಮುಟ್ಟ ರಸ್ತೆಯಿಂದ ಕಕ್ಕುಂದಕಾಡು ಗ್ರಾಮದವರೆಗೆ ರಸ್ತೆ ದುರಸ್ತಿಗೊಳಿಸದೆ ಸುಮಾರು 10 ವರ್ಷಗಳೇ ಸಂದಿವೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದು, ಎಲ್ಲರೂ ಕಡು ಬಡವರಾಗಿದ್ದಾರೆ. ಅವರಿಗೆ ಈ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಕೊಂಡಿದೆ. ವೃದ್ಧರು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೋ ರಿಕ್ಷಾಗಳು ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತಿಲ್ಲ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿದರೆ, ಆಯಾ ತಪ್ಪಿ ಬಿದ್ದು ಕೈಕಾಲು ಮುರಿದುಕೊಳ್ಳುವ ಭೀತಿ ಮೂಡಿದೆ ಎಂದರು.

ಈ ರಸ್ತೆಗೆ ಅಡ್ಡಲಾಗಿ ಗ್ರಾಮ ಪಂಚಾಯಿತಿಯಿಂದ ಒಂದು ಮೋರಿ ನಿರ್ಮಿಸಲಾಗಿದೆ. ಇದರ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಮಳೆ ನೀರು ನಿಂತು ಓಡಾಡಲೇ ಸಾಧ್ಯವಿಲ್ಲದಾಗಿದೆ. ಆದುದರಿಂದ ಜಿಲ್ಲಾಧಿಕಾರಿಗಳು ಕೂಡಲೇ ನಮ್ಮ ಸಮಸ್ಯೆಯ ಬಗ್ಗೆ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದಿದ್ದಾರೆ.