ಮಡಿಕೇರಿ, ಮೇ 7: ಕೊಡಗಿನಲ್ಲಿ ಪ್ರಸ್ತುತ ಸರಕಾರಿ ಸೇವೆಯಲ್ಲಿರುವ ಉದ್ಯೋಗಿಗಳು ಮತ್ತು ಖಾಸಗಿ ನೌಕರರ ಅನುಕೂಲಕ್ಕೆ ತಕ್ಕಂತೆ, ಬೆಳಿಗ್ಗೆ ಹಾಗೂ ಸಂಜೆ ಹೆಚ್ಚಿನ ಆದ್ಯತೆಯೊಂದಿಗೆ ರಾಜ್ಯ ಸಾರಿಗೆ ಬಸ್‍ಗಳನ್ನು ಓಡಿಸಲಾಗುತ್ತಿದೆ ಎಂದು ಮಡಿಕೇರಿ ಘಟಕ ವ್ಯವಸ್ಥಾಪಕಿ ಗೀತಾ ಅವರು ಮಾಹಿತಿ ನೀಡಿದ್ದಾರೆ.

ವಿವಿಧ ಕಚೇರಿ ಉದ್ಯೋಗಿಗಳ ಹೊರತು ಸಾರ್ವಜನಿಕರು ಅಷ್ಟಾಗಿ ಪ್ರಯಾಣಿಸುತ್ತಿಲ್ಲ ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಸೋಮವಾರಪೇಟೆ, ವೀರಾಜಪೇಟೆ, ಗೋಣಿಕೊಪ್ಪಲುವಿನಲ್ಲಿ ಒಂದೊಂದು ಬಸ್ ರಾತ್ರಿ ತಂಗಲಿದ್ದು, ಬೆಳಿಗ್ಗೆ ಉದ್ಯೋಗಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕರೆತರಲಿರುವುದಾಗಿ ನೆನಪಿಸಿದರು.

ಸೋಮವಾರಪೇಟೆ-ಕುಶಾಲನಗರ ನಡುವೆಯೂ ಒಂದು ಬಸ್ ಸಂಚರಿಸುತ್ತಿದ್ದು, ಜಿಲ್ಲಾ ಕೇಂದ್ರದಿಂದ 4 ಬಸ್‍ಗಳು ಕುಶಾಲನಗರ ನಡುವೆ ಓಡಾಡಲಿವೆ ಎಂದು ಮಾಹಿತಿ ನೀಡಿದರು.

ಒಟ್ಟಿನಲ್ಲಿ ಇಂದು ಜಿಲ್ಲೆಯಲ್ಲಿ 14 ರಾಜ್ಯ ಸಾರಿಗೆ ಬಸ್‍ಗಳ ಓಡಾಟವಿದ್ದುದಾಗಿಯೂ ಅವರು ತಿಳಿಸಿದ್ದು, ಪ್ರಯಾಣಿಕರು ಕೈಬೆರಳೆಣಿಕೆಯಷ್ಟೇ ಎಂದು ನೆನಪಿಸಿದರು.