ಮಡಿಕೇರಿ, ಮೇ 6 : ತಾಲೂಕಿನ ವಿವಿಧ ಗ್ರಾಮಗಳಿಂದ ಒಟ್ಟು 51 ಜನ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಿಕೊಡಲಾಗಿದೆ. ಕಡಗದಾಳುವಿನಿಂದ 4, ಕೋಣಂಜಗೇರಿ 6, ಬೆಟ್ಟಗೇರಿ 3, ಮೇಕೇರಿ 2 ಮತ್ತು ಮಕ್ಕಂದೂರು 15 ಒಟ್ಟು 30 ಕಾರ್ಮಿಕರನ್ನು ಬಸ್ಸ್ ನಂಬರ್ ಕೆಎ-21 ಎಫ್-0274 ರಲ್ಲಿ ಹಾಗೂ ಮೇಕೇರಿಯಿಂದ 7, ನರಿಯಂದಡ 3, ಪೆರಾಜೆ 1, ಕುಂದಚೇರಿ 6, ಮರಗೋಡು 1, ಬೆಟ್ಟಗೇರಿ 3 ಸೇರಿದಂತೆ ಒಟ್ಟು 21 ಕಾರ್ಮಿಕರನ್ನು ಬಸ್ ನಂಬರ್ ಕೆಎ-21 ಎಫ್-0134 ರಲ್ಲಿ ಜಿಲ್ಲಾಡಳಿತದ ಮೂಲಕ ಉಚಿತವಾಗಿ ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಹ್ಯಾಂಡ್‍ವಾಸ್ ಸೋಪ್ ಮತ್ತು ಸ್ಯಾನಿಟೈಜರ್ ವಿತರಿಸಿ ಅವರವರ ಊರುಗಳಿಗೆ ಕಳುಹಿಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ ಯತ್ನಟ್ಟಿ ಅವರು ತಿಳಿಸಿದ್ದಾರೆ. ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್, ಸ್ಥಳೀಯ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಹುಸೇನ್ ಮತ್ತು ಚೆಂಗಪ್ಪ ಇತರರು ಇದ್ದರು.