ವೀರಾಜಪೇಟೆ, ಮೇ 6: ವೀರಾಜಪೇಟೆ ತಾಲೂಕಿನ ವಿವಿಧೆಡೆಗಳ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಕಾರ್ಮಿಕರು ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧದಿಂದ ಇಲ್ಲಿಯೇ ಇದ್ದು, ಈ ಎಲ್ಲಾ ಕಾರ್ಮಿಕರುಗಳ ಮಾಹಿತಿ ಪಡೆದು ಅವರುಗಳ ತವರಿಗೆ ಕಳಿಸಲು ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಮಾಡಲಾಗಿದೆ. ಹಾವೇರಿ, ಕೊಪ್ಪಳ, ಚಾಮರಾಜನಗರ, ಕೊಳ್ಳೆಗಾಲ ಸೇರಿದಂತೆ ಉತ್ತರ ಕರ್ನಾಟಕದಿಂದ ಬಂದಿರುವ ಎಲ್ಲ ಕಾರ್ಮಿಕರುಗಳನ್ನು ಸರಕಾರದ ವೆಚ್ಚದಲ್ಲಿ ಅವರುಗಳ ಊರಿಗೆ ಕಳುಹಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ ಎಂದು ತಹಶೀಲ್ದಾರ್‍ಗೆ ಎಂ.ಎಲ್. ನಂದೀಶ್ ತಿಳಿಸಿದ್ದಾರೆ.
ಬೆಂಗಳೂರಿನಿಂದ ವೀರಾಜಪೇಟೆಗೆ ಬಂದು ಪಟ್ಟಣದಲ್ಲಿ ಸಂಶಯಾಸ್ಪದ ವಾಗಿ ಸಂಚರಿಸುತ್ತಿದ್ದ ಕೇರಳದ ಇಬ್ಬರು ನಿವಾಸಿಗಳನ್ನು ಇಲ್ಲಿನ ನಗರ ಪೊಲೀಸರು ತಹಶೀಲ್ದಾರ್‍ಗೆ ಒಪ್ಪಿಸಿದ ಮೇರೆ ಇಬ್ಬರನ್ನು ಇಲ್ಲಿನ ಬಿ.ಸಿ.ಎಂ ಹಾಸ್ಟೇಲ್‍ನ ಕ್ವಾರಂಟೈನ್‍ನಲ್ಲಿರಿಸ ಲಾಗಿದೆ. ಈಗ ಇಲ್ಲಿನ ಹಾಸ್ಟೇಲ್‍ನಲ್ಲಿ ಹಿಂದಿನ 15 ಮಂದಿ ಸೇರಿದಂತೆ ಒಟ್ಟು 17 ಮಂದಿ ಇದ್ದಾರೆ. ಇಲ್ಲಿನ ಟೈ¯ರ್ ಸಂಘಟನೆಯು ಪಡಿತರ ಕಿಟ್‍ಗೆ ಬೇಡಿಕೆ ಇಟ್ಟಿದ್ದು, ಸುಮಾರು 100 ಮಂದಿ ಟೈಲರ್ ವೃತ್ತಿಯಲ್ಲಿರು ವವರಿಗೆ ಪಡಿತರ ಕಿಟ್ ವಿತರಿಸಲಾಗುವುದು ಎಂದು ನಂದೀಶ್ ತಿಳಿಸಿದರು.