ನಾಪೆÇೀಕ್ಲು, ಮೇ 6: ಕೊಳಕೇರಿ ಗ್ರಾಮದಲ್ಲಿ ಕಳೆದ 4 ದಿನಗಳಿಂದ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಕಾಫಿ, ಬಾಳೆ, ಅಡಿಕೆ, ತೆಂಗು, ಶುಂಠಿ ಸೇರಿದಂತೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಹಿಂಡಿನಲ್ಲಿ ನಾಲ್ಕು ಕಾಡಾನೆಗಳಿದ್ದು, ರಾತ್ರಿಯಾಗುತ್ತಿದ್ದಂತೆ ತೋಟದಿಂದ ತೋಟಕ್ಕೆ ಅಲೆದಾಡಿ ಸಿಕ್ಕಸಿಕ್ಕ ಬೆಳೆಗಳನ್ನು ನಾಶಪಡಿಸುತ್ತಿವೆ. ಕಾಡಾನೆ ಹಾವಳಿಗೆ ಕೊಳಕೇರಿ ಗ್ರಾಮದ ಕಾಂಡಂಡ, ಕನ್ನಂಬಿರ, ಕುಂಡ್ಯೋಳಂಡ, ಕೇಟೋಳಿರ ಹಾಗೂ ನಾಪೆÇೀಕ್ಲು ಗ್ರಾಮದ ಕುಲ್ಲೇಟಿರ ಕುಟುಂಬಸ್ಥರ ತೋಟಗಳಿಗೆ ಹಾನಿ ಉಂಟಾಗಿದೆ. ಕಾಡಾನೆ ಭಯದಿಂದ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ಅರಣ್ಯ ಇಲಾಖೆ ಇವುಗಳನ್ನು ವಾಪಾಸು ಕಾಡಿಗಟ್ಟುವ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.