ಸೋಮವಾರಪೇಟೆ, ಮೇ 6: ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಪಟ್ಟಣದ ಖಾಸಗಿ ಬಸ್ ಚಾಲಕರು ಹಾಗೂ ಕೆಲಸಗಾರರ 35 ಕುಟುಂಬಗಳಿಗೆ ಕಾಯಕ ದಿನಾಚರಣೆ ಅಂಗವಾಗಿ ನಂದಿ ಏಜೆನ್ಸಿ ಪೆಟ್ರೋಲ್ ಬಂಕ್ ಮಾಲೀಕ ಹೆಚ್.ಬಿ. ಹೃಷಿಕೇಶ್ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಈ ಸಂದರ್ಭ ಚಕ್ರವರ್ತಿ ಬಸ್ ಮಾಲೀಕ ಸುರೇಶ್, ಬಸಪ್ಪ ಹಾರ್ಡ್‍ವೇರ್ಸ್‍ನ ಮಾಲೀಕ ಅಮಿತ್ ಇದ್ದರು.