ಗೋಣಿಕೊಪ್ಪಲು, ಮೇ 6 : ಈಗಾಗಲೇ ದಕ್ಷಿಣ ಕೊಡಗಿನ ಹಾಡಿಗಳು ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾಲೋನಿ ನಿವಾಸಿಗಳು, ಪೌರ ಕಾರ್ಮಿಕರಿಗೆ ತರಕಾರಿ ವಿತರಣೆ ಮಾಡಲಾಗಿದ್ದು, ಇನ್ನು ಮುಂದೆಯೂ ಅಗತ್ಯ ಇರುವೆಡೆ ತರಕಾರಿ ವಿತರಣೆ ಮಾಡಲಾಗುವದು ಎಂದು ಕರ್ನಾಟಕ ಪ್ರಾಂತ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಕೆ. ಶಶಿಕುಮಾರ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ನಾಗರಹೊಳೆ ವನ್ಯಜೀವಿವಲಯದ 6 ಹಾಡಿಗಳು, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು ಹಾಗೂ ದಿನಗೂಲಿ ನೌಕರರು ಮತ್ತು ತಾಲೂಕಿನ ವಿವಿಧ ಕಾಲೋನಿಯ ಸುಮಾರು 200 ಕುಟುಂಬಗಳಿಗೆ ವಿತರಣೆ ಮಾಡಲು ಕರ್ನಾಟಕ ಮಾನವ ಹಕ್ಕು ಸಮಿತಿಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ವಿತರಿಸಿದರು.
ಈ ಸಂದರ್ಭ ಕರ್ನಾಟಕ ಪ್ರಾಂತ ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್, ಮಂಡ್ಯ ಜಿಲ್ಲಾ ಗೌರವಾಧ್ಯಕ್ಷ ಮಧು ಗೌಡ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಮ್ಮಯ್ಯ ಹಾಗೂ ಚಾಲಕ ಅಸ್ಗರ್ ಮುಂತಾದವರು ಉಪಸ್ಥಿತರಿದ್ದರು.