ಮಡಿಕೇರಿ, ಮೇ 6: ಕೋವಿಡ್-19 ರ ಸಂಬಂಧ ಲಾಕ್ ಡೌನ್ ನಿಂದ ಸಿಲುಕಿದ ಅನೇಕ ಜನರು ಕೇರಳದಿಂದ ಕೊಡಗು ಜಿಲ್ಲೆಗೆ ಪ್ರವೇಶಿಸಲು ಛಿoviಜ19ರಿಚಿgಡಿಚಿಣhಚಿ ಪೆÇೀರ್ಟಲ್ ಮೂಲಕ ಪಾಸ್‍ಗಳನ್ನು ಪಡೆದುಕೊಂಡಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.

ಕರ್ನಾಟಕ ರಾಜ್ಯ ಸರ್ಕಾರವು ಕೇರಳ ಸೇರಿದಂತೆ ಇತರ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

* ಕರ್ನಾಟಕದ ಸೇವಾ ಸಿಂಧು ತಂತ್ರಾಂಶದ ಮೂಲಕ ಪಡೆದ ಅಧಿಕೃತ ಇ-ಪಾಸ್ ಗಳನ್ನು ಹೊಂದಿರುವವರನ್ನು ಹೊರತುಪಡಿಸಿ ಬೇರೆ ಯಾವುದೇ ಪಾಸ್ ಹೊಂದಿರುವವರಿಗೆ ಕರ್ನಾಟಕ ರಾಜ್ಯಕ್ಕೆ ಪ್ರವೇಶ ನೀಡಲಾಗುವುದಿಲ್ಲ.

* ಕೊಡಗು ಜಿಲ್ಲೆಯ ನಿವಾಸಿಗಳೆಂದು ದೃಢೀಕರಿಸುವ ಅಧಿಕೃತ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಸೇವಾ ಸಿಂಧು ಅರ್ಜಿಯು ಪರಿಗಣಿಸಲ್ಪಡುತ್ತದೆ.

* ಈವರೆಗೆ ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಮತ್ತು ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ನೇರವಾಗಿ ಯಾವುದೇ ಪ್ರವೇಶ, ನಿರ್ಗಮನ ದ್ವಾರಗಳಿರುವುದಿಲ್ಲ.

* ಕರ್ನಾಟಕ ರಾಜ್ಯದೊಳಗೆ ಪ್ರವೇಶಿಸುವ ವ್ಯಕ್ತಿಯು ಕರ್ನಾಟಕ ರಾಜ್ಯದ ಚೆಕ್ ಪೆÇೀಸ್ಟ್ ನಲ್ಲಿ ನಿಯೋಜಿತರಾಗಿರುವ ವೈದ್ಯಕೀಯ ತಪಾಸಣಾ ಸಮಿತಿಯು ತೆಗೆದುಕೊಳ್ಳುವ ನಿರ್ಧಾರದಂತೆ 14 ದಿನಗಳ ಕಾಲ ಗೃಹ ಸಂಪರ್ಕ ತಡೆ, ಸಾಂಸ್ಥಿಕ ಸಂಪರ್ಕ ತಡೆ, ಆಸ್ಪತ್ರೆಯಲ್ಲಿ ಸಂಪರ್ಕ ತಡೆಯಲ್ಲಿರುವುದು ಕಡ್ಡಾಯವಾಗಿರುತ್ತದೆ.

* ಕೊಡಗು ಜಿಲ್ಲೆಗೆ ಕುಶಾಲನಗರದ ಕೊಪ್ಪಚೆಕ್ ಪೆÇೀಸ್ಟ್ (ಮೈಸೂರು ಜಿಲ್ಲೆಯ ಸರಹದ್ದು) ಮತ್ತು ಸಂಪಾಜೆ ಚೆಕ್ ಪೆÇೀಸ್ಟ್ (ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದು) ಗಳ ಮುಖಾಂತರ ಮಾತ್ರ ಪ್ರವೇಶಿಸಲು ಅವಕಾಶವಿದೆ.