ಮಡಿಕೇರಿ, ಮೇ 6: ನಿಸರ್ಗ ಯುವತಿ ಮಂಡಳಿಯವರು ಹಾಗೂ ನೆಹರು ಯುವ ಕೇಂದ್ರ ಮಡಿಕೇರಿ ಇವರ ಸಹಯೋಗದಲ್ಲಿ ಮಾಸ್ಕ್ಗಳನ್ನು ಪೊಲೀಸ್ ಇಲಾಖೆಯ ನೌಕರರು, ಗ್ರಾಮ ಪಂಚಾಯತಿ ನೌಕರರು ಹಾಗೂ ನಗರದ ವಯೋವೃದ್ಧರಿಗೆ ಉಚಿತವಾಗಿ ನೀಡಲಾಯಿತು.
ಈ ಮಾಸ್ಕ್ ಅನ್ನು ಸ್ವೀಕರಿಸಿದ ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್ ಮಾತನಾಡಿ ನಿಸರ್ಗಯುವತಿ ಮಂಡಳಿಯ ಈ ಹಿಂದಿನ ಸಾಕಷ್ಟು ಸಮಾಜ ಮುಖಿ ಕಾರ್ಯಗಳ ಕುರಿತು ಹಾಗೂ ಈಗಿನ ಜಾಗತಿಕ ಮಟ್ಟದಲ್ಲಿ ಬಹು ಬೇಡಿಕೆ ಇರುವ ಮಾಸ್ಕ್ಗಳ ತಯಾರಿಸಿ ಉಚಿತವಾಗಿ ಸಿಬ್ಬಂದಿಗಳಿಗೆ ಹಾಗೂ ವಯೋವೃದ್ಧರಿಗೆ ನೀಡಿದ ಕಾರ್ಯವನ್ನು ಶ್ಲಾಘಿಸಿ ಅವರ ಸಮಾಜಮುಖಿ ಸೇವಾ ಕಾರ್ಯಗಳು ಮುಂಬರುವ ದಿನಗಳಲ್ಲಿ ಇನ್ನಷ್ಟು ಆಗಲಿ ಎಂದು ಹಾರೈಸಿದರು.
ಮಾಸ್ಕ್ ವಿತರಣೆಯ ಸಂದರ್ಭ ನಿಸರ್ಗ ಯುವತಿ ಮಂಡಳಿಯ ಅಧ್ಯಕ್ಷೆ ರೇಖಾ ಶ್ರೀಧರ್, ಪೊನ್ನಂಪೇಟೆಯ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ. ನಿಸರ್ಗ ಯುವತಿ ಮಂಡಳಿಯ ಖಜಾಂಜಿ ಅನುಪಮ, ಕಾರ್ಯದರ್ಶಿ ಜಯಂತಿ ಪದಾಧಿಕಾರಿಗಳಾದ ಗೀತಾ, ಸರಸ್ವತಿ, ಸುಜಾತ ಹಾಜರಿದ್ದರು.