ಶನಿವಾರಸಂತೆ, ಮೇ 5: ಪಟ್ಟಣದ ಮುಖ್ಯ ರಸ್ತೆಯಲ್ಲಿ ಸುಣ್ಣದ ಮೂಟೆಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಮಹೇಂದ್ರ ಪಿಕ್ ಅಪ್ 407 (ಕೆಎ13-ಸಿ 2942) ವಾಹನಕ್ಕೆ ಮೋಟಾರ್ ಬೈಕ್ (ಕೆಎ12-ಜೆ-8263) ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಾಯಗೊಂಡ ದುರ್ಘಟನೆ ಮಂಗಳವಾರ ಸಂಜೆ ನಡೆದಿದೆ.ಸಮೀಪದ ಗಡಿಭಾಗ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಕೋಡಿ ಗ್ರಾಮದ ವಿಜಯ್ (27) ಬೈಕ್‍ನಿಂದ ಹಾರಿ ಬಿದ್ದು ಮೃತಪಟ್ಟ ದುರ್ದೈವಿ ಯುವಕ. (ಮೊದಲ ಪುಟದಿಂದ) ಬಿದರೂರು ಗ್ರಾಮದ ಯುವಕ ಮುಜಾವಿದ್ (25) ಹಿಂಬದಿ ಸವಾರನಾಗಿದ್ದು, ಗಾಯಗೊಂಡಿದ್ದು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಿಪಿಐ ನಂಜುಡೇಗೌಡ, ಪಿಎಸ್‍ಐ ಕೃಷ್ಣನಾಯಕ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಸ್‍ಐ ಕೃಷ್ಣ ನಾಯಕ್ ಪ್ರಕರಣ ದಾಖಲಿಸಿರುತ್ತಾರೆ.