ಕುಶಾಲನಗರ, ಮೇ 5: ಗಡಿಭಾಗದ ನಾಗರಿಕರಿಗೆ ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಗಡಿ ಪೊಲೀಸ್ ತಪಾಸಣಾ ಕೇಂದ್ರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎರಡು ಜಿಲ್ಲೆಗಳ ತಪಾಸಣಾ ಕೇಂದ್ರಗಳಲ್ಲ್ಲಿ ಸೌಹಾರ್ದ ಯುತ ಹೊಂದಾಣಿಕೆ ಯೊಂದಿಗೆ ಜನರ ಪಯಣಕ್ಕೆ ಅನುವು ಮಾಡಿ ಕೊಡುವಂತೆ ಸಲಹೆಯಿತ್ತಿದ್ದಾರೆ.ಅವರು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮತ್ತು ಹಿರಿಯ ಅಧಿಕಾರಿಗ ಳೊಂದಿಗೆ ಕೊಪ್ಪ ಗಡಿಭಾಗಕ್ಕೆ ಮಂಗಳವಾರ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಿಂದ ಕೊಡಗು-ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರನ್ನು ಕೊಪ್ಪ ಚೆಕ್ ಪೋಸ್ಟ್‍ನಲ್ಲಿ ಯಾವುದೇ ಸ್ಕ್ರೀನಿಂಗ್‍ಗೆ ಒಳಪಡಿಸದೆ ಬಿಡಬೇಕು. ಏಕೆಂದರೆ, ಈ ಕೆಲಸವನ್ನು ಕುಶಾಲನಗರ ಚೆಕ್‍ಪೋಸ್ಟ್‍ನಲ್ಲಿ ಮಾಡಲಾಗುತ್ತಿದೆ. ಬಗ್ಗೆ ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಿಂದ ಕೊಡಗು-ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರನ್ನು ಕೊಪ್ಪ ಚೆಕ್ ಪೋಸ್ಟ್‍ನಲ್ಲಿ ಯಾವುದೇ ಸ್ಕ್ರೀನಿಂಗ್‍ಗೆ ಒಳಪಡಿಸದೆ ಬಿಡಬೇಕು. ಏಕೆಂದರೆ, ಈ ಕೆಲಸವನ್ನು ಕುಶಾಲನಗರ ಚೆಕ್‍ಪೋಸ್ಟ್‍ನಲ್ಲಿ ಮಾಡಲಾಗುತ್ತಿದೆ. (ಮೊದಲ ಪುಟದಿಂದ) ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.ಇದೇ ಸಂದರ್ಭ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರೊಂದಿಗೆ ಮಾಹಿತಿ ಪಡೆದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗಡಿಭಾಗದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಯಾವುದೇ ಸಮಸ್ಯೆಗಳಿದ್ದಲ್ಲಿ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಸಮಸ್ಯೆ ಪರಿಹಾರ ಸಾಧ್ಯ ಎಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಕೃಷಿಕರಿಗೆ ನೀಡಲಾಗುವ ಗ್ರೀನ್ ಪಾಸ್, ವರ್ತಕರು ವ್ಯಾಪಾರ ವಹಿವಾಟುಗಳಿಗೆ ಓಡಾಡಲು ತೊಂದರೆಯಾಗದಂತೆ ಗಡಿ ಭಾಗದಲ್ಲಿ ಕೆಲಸ ನಿರ್ವಹಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮೈಸೂರು ಜಿಲ್ಲೆಗೆ ಆಗಮಿಸುವ ಇತರ ಜಿಲ್ಲೆಯ ಜನರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸುವ ನಿಟ್ಟಿನಲ್ಲಿ ರಸ್ತೆಯಿಂದ ಹೊರಭಾಗದ ಪ್ರದೇಶದಲ್ಲಿ ಸೂಕ್ತ ತಪಾಸಣಾ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು. ಈ ಇಬ್ಬರು ಅಧಿಕಾರಿಗಳೂ ಕೊಡಗಿನ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.

ಮೈಸೂರು-ಕೊಡಗು ಜಿಲ್ಲಾ ಗಡಿಭಾಗವಾದ ಕೊಪ್ಪ ಗ್ರಾಮದಲ್ಲಿ ಶಾಶ್ವತ ಪೊಲೀಸ್ ತಪಾಸಣಾ ಕೇಂದ್ರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಈ ಸಂದರ್ಭ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಈಗಾಗಲೇ ಬೇರೆ ಜಿಲ್ಲೆಗಳಿಂದ ಕೊಡಗಿನ ಗಡಿ ಮೂಲಕ ಜಿಲ್ಲೆಗೆ ನಿನ್ನೆಯಿಂದ ಇದುವರೆಗೆ 1396 ಮಂದಿ ಬಂದಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಶೇ. 70 ರಷ್ಟು ಮಂದಿ ವೀರಾಜಪೇಟೆಯವರಾಗಿದ್ದಾರೆ.

ಈ ಸಂದರ್ಭ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ, ಉಪವಿಭಾಗಾಧಿಕಾರಿ ವೀಣಾ, ತಹಶೀಲ್ದಾರ್ ಶ್ವೇತ, ಡಿವೈಎಸ್ಪಿ ಸುಂದರ್‍ರಾಜ್, ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿಗಳಾದ ಸವಿ, ಲೋಕೇಶ್ ಮತ್ತಿತರರು ಇದ್ದರು.