ಕುಶಾಲನಗರ, ಮೇ 4: ಅತಿ ಬಡತನದಲ್ಲಿರುವ ಕುಟುಂಬದ ಸದಸ್ಯರಿಗೆ ಔಷಧ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಿಜೆಪಿ ತಂಡದ ಕಾರ್ಯಕರ್ತರು ಅಂತಹವರನ್ನು ಗುರುತಿಸಿ ಮನೆಮನೆಗೆ ಔಷಧಿ ತಲುಪಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಖ್ಯಮಂತ್ರಿಗಳ ಆಶಯದಂತೆ ಅವರ ಪುತ್ರ ವಿಜಯೇಂದ್ರ ಅವರ ಮಾರ್ಗದರ್ಶನದಲ್ಲಿ ಬಡ, ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಉಚಿತ ಔಷಧಿ ತಲುಪಿಸುವ ಕಾರ್ಯ ವಿವಿಧೆಡೆ ನಡೆಯುತ್ತಿದೆ. ಜಿಲ್ಲಾ ಬಿಜೆಪಿ ಪ್ರಮುಖರಾದ ಬಿ.ಬಿ.ಭಾರತೀಶ್ ನೇತೃತ್ವದಲ್ಲಿ ಎಲ್ಲೆಡೆ ಈ ಕಾರ್ಯ ನಡೆಯುತ್ತಿದ್ದು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ದರ್ಶನ್, ಕುಶಾಲನಗರ ವ್ಯಾಪ್ತಿಯಲ್ಲಿ ವೈಶಾಖ್, ಅಶ್ವಿನ್, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ರಂಜು, ಸಿದ್ದಾಪುರ ವ್ಯಾಪ್ತಿಯಲ್ಲಿ ಸತೀಶ್, ಗರಗಂದೂರಿನಲ್ಲಿ ದೇವಪ್ಪ, ಭೂತನಕಾಡಿನಲ್ಲಿ ಮನು, ಮಡಿಕೇರಿ ವ್ಯಾಪ್ತಿಯಲ್ಲಿ ಸುನಿಲ್ ಗಣಪತಿ, ಅಪ್ಪಣ್ಣ ಅವರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಔಷಧಿಯ ಅವಶ್ಯಕತೆ ಇರುವ ಬಡ ರೋಗಿಗಳು ಸ್ಥಳೀಯ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರನ್ನು ಸಂಪರ್ಕಿಸುವಂತೆ ಬಿ.ಬಿ.ಭಾರತೀಶ್ ಕೋರಿದ್ದಾರೆ.