ನಾಪೋಕ್ಲು, ಮೇ 4: ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಇಲ್ಲಿನ ಪೊಲೀಸ್ ಠಾಣೆಯ ಪಿಎಸ್‍ಐ ಆರ್. ಕಿರಣ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಾರ್ವಜನಿಕರು ಸಹಕರಿಸಿದರೆ ಇಲಾಖೆಯು ಕೈಜೋಡಿಸುತ್ತದೆ. ಕಾನೂನು ಉಲ್ಲಂಘಿಸಿದವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಿರಣ್ ಹೇಳಿದರು. ನಾಪೋಕ್ಲು ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿದ್ದು ಅದನ್ನು ಪರಿಹರಿಸುವ ಕುರಿತು ಗ್ರಾಮಸ್ಥ ಕೆ.ಎ. ಹ್ಯಾರೀಸ್ ಸಲಹೆ, ಸೂಚನೆ ನೀಡಿದರು. ಬಿ.ಎಸ್. ತಮ್ಮಯ್ಯ ಮಾತನಾಡಿ ಆಟೋಗಳ ಸಂಚಾರಕ್ಕೆ ಮಾನವೀಯತೆ ದೃಷ್ಟಿಯಿಂದ ವಿನಾಯಿತಿ ನೀಡಬೇಕು. ಗ್ರಾಹಕರ ತಪ್ಪಿಗೆ ವರ್ತಕರಿಗೆ ದಂಡ ವಿಧಿಸುವುದು ಸರಿಯಲ್ಲ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದರು. ಪ್ರೊಬೆಷನರಿ ಪಿಎಸ್‍ಐ ಜಗದೀಶ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸಂತುಸುಬ್ರಮಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಾಬತಿಮ್ಮಯ್ಯ, ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.