ಮಡಿಕೇರಿ, ಮೇ 5: ಚಾನಲ್ ಕೂರ್ಗ್ ಬಳಗವು ಪೆÇನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ಹಾಗೂ ಮಡಿಕೇರಿಯ ನೆಹರು ಯುವ ಒಕ್ಕೂಟದ ಸಹಕಾರದೊಂದಿಗೆ ಉತ್ತಮ ಗುಣಮಟ್ಟದ ಬಟ್ಟೆಯ ಹಾಗೂ ಸ್ವಚ್ಛಗೊಳಿಸಿ ಮರುಬಳಕೆಗೆ ಯೋಗ್ಯವಾಗಿರುವ ಮಾಸ್ಕ್‍ಗಳನ್ನು ತಯಾರಿಸಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅವುಗಳನ್ನು ಸಾಧ್ಯವಾದಷ್ಟು ಬಡವರ್ಗಕ್ಕೆ ಉಚಿತವಾಗಿ ದೊರಕುವಂತೆ ಪ್ರಯತ್ನಿಸುತ್ತಿದೆ. ಇತರರಿಗೆ ಕಡಿಮೆ ದರದಲ್ಲಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಚಾನಲ್ ಕೂರ್ಗ್ ಬಳಗಕ್ಕೆ ಹಾಗೂ ನಮ್ಮ ಸೇವಾ ಮನೋಭಾವಕ್ಕೆ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಕುಶಾಲನಗರದ ನಮ್ಮ ಕೊಡಗು ತಂಡ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲೆ, ಕೊಡಗು ಬ್ಲಡ್ ಡೋನರ್ಸ್ ತಂಡ ಹೀಗೆ ಹಲವು ಸಂಘಟನೆಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಮಾಸ್ಕ್‍ಗಳನ್ನು ಗೌರವ ಧನ ನೀಡಿ ಖರೀದಿಸಿ ಅವುಗಳನ್ನು ಉಚಿತವಾಗಿ ಬಡವರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ವೀರಾಜಪೇಟೆ, ಪೆÇನ್ನಂಪೇಟೆ ಹಾಗೂ ಗೋಣಿಕೊಪ್ಪಲು ಪ್ರದೇಶಗಳಲ್ಲಿ ಸ್ವತಃ ನಿಸರ್ಗ ಮಹಿಳಾ ಮಂಡಳಿಯವರು ಮಾಸ್ಕ್ ಅನ್ನು ಸರಕಾರಿ ಕಚೇರಿಗಳಿಗೆ ಹಾಗೂ ವಯೋವೃದ್ಧರಿಗೆ ಉಚಿತವಾಗಿ ನೀಡುತ್ತಿದ್ದಾರೆ.

ಚಾನಲ್ ಕೂರ್ಗ್ ಸೇವಾ ಘಟಕವು ಕೊರೊನಾ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ, ಕೊಡಗಿನ ಮೂಲೆ ಮೂಲೆಗೂ ಮಾಹಿತಿ ಒದಗಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದು, ಮಡಿಕೇರಿ ಆಕಾಶ ವಾಣಿ ಸಿಬ್ಬಂದಿಗಳಿಗೆ, ಕೊಡಗಿನಲ್ಲಿ ಅವಿರತವಾಗಿ ಪತ್ರಿಕೋದ್ಯಮ ಸೇವೆಯಲ್ಲಿರುವ ಶಕ್ತಿ ದಿನಪತ್ರಿಕೆಯ ಸಿಬ್ಬಂದಿಗಳಿಗೆ, ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಕಚೇರಿಗೆ, ಪ್ರಜಾಸತ್ಯ ದಿನಪತ್ರಿಕೆಯ ಸಿಬ್ಬಂದಿ ಗಳಿಗೆ, ನ್ಯೂಸ್ ಡೆಸ್ಕ್ ಅಂತರ್ಜಾಲ ಪತ್ರಿಕೆಯ ಸಿಬ್ಬಂದಿಗಳಿಗೆ, ವಾರ್ತಾ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ನಗರದ ತ್ಯಾಗರಾಜ ಕಾಲೋನಿಯ ಲ್ಲಿರುವ ಶಕ್ತಿ ವೃದ್ಧಾಶ್ರಮದ ಸಿಬ್ಬಂದಿ ವರ್ಗಕ್ಕೂ ಹಾಗೂ ಅಲ್ಲಿನ ವಯೋವೃದ್ಧರಿಗೂ ಉಚಿತವಾಗಿ ಮಾಸ್ಕ್ ಅನ್ನು ನೀಡಿತು.

ಶಕ್ತಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮತ್ತಿತರರು ಶುಭ ಹಾರೈಸಿದರು. ಮಾಸ್ಕ್ ವಿತರಣೆಯ ಸಂದರ್ಭ ಚಾನಲ್ ಕೂರ್ಗ್‍ನ ಪ್ರಧಾನ ಸಂಪಾದಕ ಶ್ರೀಧರ್ ನೆಲ್ಲಿತಾಯ, ದೀಕ್ಷಿತ್ ನೆಲ್ಲಿತಾಯ, ಉಪಸಂಪಾದಕ ರಂಜಿತ್ ಕವಲಪಾರ, ನಿರ್ದೇಶಕ ಟಿ. ರಾಜೇಂದ್ರ ಹಾಗೂ ವರದಿಗಾರ ಚಂದನ್ ಎನ್.ಕೆ. ಹಾಜರಿದ್ದರು.